ಮನೆಯಲ್ಲೇ ಇರಿ ಎಂದ್ರೂ ಕೇಳಿಲ್ಲ – ರಸ್ತೆಗೆ ಬಂದವರಿಗೆ ಬಿತ್ತು ಲಾಠಿ ಏಟು

ಬೆಂಗಳೂರು: ರಸ್ತೆಗೆ ಇಳಿಯಬೇಡಿ, ಮನೆಯಲ್ಲೇ ಇರಿ ಎಂದು ಸಾಕಷ್ಟು ಬಾರಿ ಹೇಳಿದರೂ ಈ ಮನವಿಯನ್ನು ಲೆಕ್ಕಿಸದೇ ರಸ್ತೆಗೆ ಇಳಿದ ಜನತೆಗೆ ಪೊಲೀಸರು ಲಾಠಿ ಏಟು ನೀಡಿದ್ದಾರೆ.

ಕರ್ನಾಟಕ ಸಂಪೂರ್ಣ ಲಾಕ್‍ಡೌನ್ ಆಗಿದ್ದರೂ ಜನ ಇಂದು ಬೆಳಗ್ಗೆಯಿಂದಲೇ ರಸ್ತೆಗೆ ಇಳಿಯುತ್ತಿದ್ದರು. ಈ ವೇಳೆ ಪೊಲೀಸರು ಮನೆಗೆ ತೆರಳುವಂತೆ ಮನವಿ ಮಾಡುತ್ತಿದ್ದರು. ಮನವಿಗೂ ಕ್ಯಾರೇ ಎನ್ನದ ಜನರಿಗೆ ಪೊಲೀಸರಿಗೆ ಲಾಠಿ ಏಟು ನೀಡಿದ್ದಾರೆ.

ಯಶವಂತಪುರದ ಗೋವರ್ಧನ್ ಥಿಯೇಟರ್ ಬಳಿ ಆಟೋಗಳು, ಸಾರ್ವಜನಿಕರ ಅನಗತ್ಯ ಓಡಾಟದ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಈ ವೇಳೆ ಕಫ್ರ್ಯೂ ಲೆಕ್ಕಿಸದೇ ರಸ್ತೆಯಲ್ಲಿ ಓಡಾಡುತ್ತಿದ್ದ ರಿಕ್ಷಾ ಚಾಲಕರಿಗೆ ಪೊಲೀಸರು ಲಾಠಿ ಪೆಟ್ಟು ನೀಡಿದ್ದಾರೆ.

ಶಿವಾಜಿನಗರ ಮತ್ತು ಕಮರ್ಷಿಯಲ್ ಸ್ಟ್ರೀಟ್ ರಸ್ತೆಗಳಲ್ಲಿ ಜನ ಸೇರಿದ್ದರು. ಮನೆಗೆ ತೆರಳುವಂತೆ ಹೇಳಿದ ಮನವಿಗೆ ಬಗ್ಗದ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿದ್ದಾರೆ.

Comments

Leave a Reply

Your email address will not be published. Required fields are marked *