ಮಾಸ್ಕ್ ಯಾರು ಧರಿಸಬೇಕು? ಎಲ್ಲರಿಗೂ ಕಡ್ಡಾಯವಲ್ಲ – ಆರೋಗ್ಯ ಇಲಾಖೆಯಿಂದ ಸ್ಪಷ್ಟನೆ

ಬೆಂಗಳೂರು: ಕೊರೊನಾ ಭೀತಿಯಿಂದಾಗಿ ಈಗ ರಸ್ತೆಗೆ ಇಳಿಯುವ ಮುನ್ನ ಮಾಸ್ಕ್ ಧರಿಸಿರಬೇಕೆಂಬ ಸುದ್ದಿ ಹರಿದಾಡುತ್ತಿದೆ. ಈ ಸುದ್ದಿಗೆ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದ್ದು, ಎಲ್ಲರೂ ಮಾಸ್ಕ್ ಧರಿಸುವ ಅಗತ್ಯವಿಲ್ಲ ಎಂದು ಹೇಳಿದೆ.

ಕೆಲವು ಸೂಪರ್ ಮಾರ್ಕೆಟ್‍ಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಮಾಸ್ಕ್ ಧರಿಸದ ವ್ಯಕ್ತಿಗಳಿಗೆ ಪ್ರವೇಶ ನಿರಾಕರಿಸುತ್ತಿರುವ ಹಿನ್ನೆಲೆಯಲ್ಲಿಯಲ್ಲಿ ಆರೋಗ್ಯ ಇಲಾಖೆ ಆಯುಕ್ತರು ಸುತ್ತೋಲೆ ಬಿಡುಗಡೆ ಮಾಡಿ ಯಾರು ಧರಿಸಬೇಕು? ಯಾರು ಮಾಸ್ಕ್ ಧರಿಸಬಾರದು ವಿಚಾರಕ್ಕೆ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಎಲ್ಲರೂ ಮಾಸ್ಕ್ ಧರಿಸಬೇಕಾಗಿಲ್ಲ ಎಂದು ತಿಳಿಸಿದ್ದಾರೆ.

ಯಾರು ಧರಿಸಬೇಕು?
ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಮಾಸ್ಕ್ ಧರಿಸಬೇಕು. ಶಂಕಿತ ಕೊರೊನಾ ರೋಗಿ ಅಥವಾ ದೃಢಪಟ್ಟ ಕೊರೊನಾ ರೋಗಿ ಮಾಸ್ಕ್ ಧರಿಸಲೇಬೇಕು. ಇಂತಹ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಸಹ ಮಾಸ್ಕ್ ಧರಿಸಬೇಕು.

ಯಾವ ರೀತಿ ಮಾಸ್ಕ್ ಉಪಯೋಗಿಸಬೇಕು ಎನ್ನುವ ಪ್ರಶ್ನೆಗೆ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಎನ್95 ಮಾಸ್ಕ್ ಧರಿಸಬೇಕು. ಇತರರು ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿದರೆ ಸಾಕು ಎಂದು ತಿಳಿಸಿದೆ.

ಮಂಗಳವಾರ ರಾಜ್ಯದಲ್ಲಿ ಹೊಸದಾಗಿ 10 ಮಂದಿಗೆ ಪಾಸಿಟಿವ್ ಬಂದಿದ್ದು, ಕೊರೊನಾ ಪೀಡಿತರ ಸಂಖ್ಯೆ 98ಕ್ಕೆ ಏರಿಕೆಯಾಗಿದೆ. ಈ ಪೈಕಿ ಮೂರು ಮಂದಿ ಮೃತಪಟ್ಟಿದ್ದು, 6 ಮಂದಿ ಗುಣಮುಖರಾಗಿದ್ದಾರೆ. 89 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ 42, ಮೈಸೂರು 14, ಚಿಕ್ಕಬಳ್ಳಾಪುರ 10, ಉತ್ತರ ಕನ್ನಡ 8, ದಕ್ಷಿಣ ಕನ್ನಡದಲ್ಲಿ 7 ಮಂದಿಗೆ ಕೊರೊನಾ ಬಂದಿದೆ.

Comments

Leave a Reply

Your email address will not be published. Required fields are marked *