92 ಹೊಸ ಕೊರೊನಾ ಪ್ರಕರಣ, ಭಾರತದಲ್ಲಿ 1071ಕ್ಕೆ ಏರಿಕೆ

ನವದೆಹಲಿ: ಕಳೆದ 24 ಗಂಟೆಯಲ್ಲಿ ದೇಶದಲ್ಲಿ ಹೊಸದಾಗಿ 92 ಪ್ರಕರಣಗಳು ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 1071ಕ್ಕೆ ಏರಿಕೆಯಾಗಿದೆ.

ಕೇಂದ್ರ ಆರೋಗ್ಯ ಸಚಿವಾಲಯ ಜಂಟಿ ಕಾರ್ಯದರ್ಶಿ ಅಗರ್‍ವಾಲ್ ಸಂಜೆ 4 ಗಂಟೆಗೆ ಸುದ್ದಿಗೋಷ್ಠಿ ನಡೆಸಿ ಒಟ್ಟು 29 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದರು.

ಇಲ್ಲಿಯವರೆಗೆ ಕೊರೊನಾ ಸ್ಥಳೀಯವಾಗಿ ಹರಡುತ್ತಿದೆಯೇ ಹೊರತು ಸಮುದಾಯಕ್ಕೆ ಬಂದಿಲ್ಲ ಎಂದು ತಿಳಿಸಿದರು. ಕರ್ನಾಟಕದಲ್ಲಿ ಇಂದು 5 ಪ್ರಕರಣ ಬಂದಿದ್ದು, ಒಟ್ಟು ಕೊರೊನಾ ಪೀಡಿತರ ಸಂಖ್ಯೆ 88ಕ್ಕೆ ಏರಿಕೆಯಾಗಿದೆ.

ಈ ಪೈಕಿ ತುಮಕೂರಿನ ರೋಗಿ 60ರ 13 ವರ್ಷದ ಮಗನಿಗೆ ಕೊರೊನಾ ಬಂದಿದೆ.  ನಂಜನಗೂಡಿನ ಫಾರ್ಮ ಕಂಪನಿಯ ಉದ್ಯೋಗಿಯಿಂದಾಗಿ  4 ಮಂದಿ ಸಹೋದ್ಯೋಗಿಗಳಿಗೆ ಕೊರೊನಾ ಬಂದಿದೆ.

ಭಾರತ ಸರ್ಕಾರ ದಿನಕ್ಕೆ ಒಂದು ಬಾರಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರೆ ಕೋವಿದ್19ಇಂಡಿಯಾ ಆಯಾ ರಾಜ್ಯಗಳ ಅಧಿಕೃತ ಪ್ರಕಟಣೆಯನ್ನು ಕ್ಷಣ ಕ್ಷಣ ಅಪ್‍ಡೇಟ್ ಮಾಡುತ್ತಿದ್ದು, ಸಂಜೆ 7 ಗಂಟೆಯ ವೇಳೆಗೆ ಒಟ್ಟು ದೇಶದಲ್ಲಿ 1263 ಮಂದಿಗೆ ಕೊರೊನಾ ಬಂದಿದೆ. ಈ ಪೈಕಿ 102 ಮಂದಿ ಗುಣಮುಖರಾಗಿದ್ದು, 32 ಮಂದಿ ಮೃತಪಟ್ಟಿದ್ದಾರೆ. 1129 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳದಲ್ಲಿ ಇವತ್ತು 32 ಮಂದಿಗೆ ಪಾಸಿಟಿವ್ ಬಂದಿದೆ. ಈ ಪೈಕಿ 17 ಮಂದಿ ಕಾಸರಗೋಡು ಜಿಲ್ಲೆಯವರಾಗಿದ್ದಾರೆ. ಅತಿ ಹೆಚ್ಚು ಕೊರೊನಾ ಪೀಡಿತ ರಾಜ್ಯಗಳ ಪೈಕಿ ಕೇರಳ(234), ಮಹಾರಾಷ್ಟ್ರ (215), ಕರ್ನಾಟಕ (88), ಉತ್ತರ ಪ್ರದೇಶ(88), ದೆಹಲಿ(72), ತೆಲಂಗಾಣ(70), ಗುಜರಾತ್(69), ರಾಜಸ್ಥಾನ(69), ತಮಿಳುನಾಡು(67) ಅನುಕ್ರಮವಾಗಿ ಮೊದಲ 10 ಸ್ಥಾನ ಪಡೆದುಕೊಂಡಿದೆ.

Comments

Leave a Reply

Your email address will not be published. Required fields are marked *