ಲಕ್ನೊ: ಮಹಾಮಾರಿ ಕೊರೊನಾ ತಡೆಗೆ ದೇಶವೇ ಲಾಕ್ಡೌನ್ ಆಗಿದೆ. ಅನಾವಶ್ಯಕವಾಗಿ ಹೊರಗೆ ಬಂದವರನ್ನು ಪೊಲೀಸರು ಗೋಡೆಗೆ ಒರಗಿ ನಿಲ್ಲುವ ಶಿಕ್ಷೆ ನೀಡುತ್ತಿದ್ದಾರೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಪೊಲೀಸರು ಜನರಿಗೆ ಮನೆಯಿಂದ ಹೊರ ಬರದಂತೆ ಸೂಚಿಸುತ್ತಿದ್ದಾರೆ. ತುರ್ತು ಸಂದರ್ಭಗಳಲ್ಲಿ ಮಾತ್ರ ಮನೆಯಿಂದ ಹೊರಬನ್ನಿ ಎಂದು ಜಾಗೃತಿ ಮೂಡಿಸುತ್ತಿದ್ದಾರೆ. ಇನ್ನು ರಸ್ತೆಯಲ್ಲಿ ಕಾಣಿಸಿಕೊಂಡವರನ್ನ ತಡೆ ಹಿಡಿದು ವಿಚಾರಣೆಗೆ ಒಳಪಡಿಸುತ್ತಿದ್ದಾರೆ. ಇಷ್ಟೆಲ್ಲ ಬಿಗಿ ಭದ್ರತೆ ಕೈಗೊಂಡಿದ್ರೂ, ಕೆಲವರು ಅನಾವಶ್ಯಕವಾಗಿ ಸುತ್ತಾಡುತ್ತ ಪೊಲೀಸರು ಲಾಠಿ ರುಚಿ ನೀಡುತ್ತಿದ್ದಾರೆ.

ಹೊರ ಬಂದಿದ್ದಕ್ಕೆ ಸೂಕ್ತ ಕಾರಣ ನೀಡದವರನ್ನು ಗೋಡೆಗಳತ್ತ ಮುಖ ಮಾಡಿ, ಕೈ ಮೇಲೆ ಎತ್ತಿಸಿ ಶಿಕ್ಷೆ ನೀಡುತ್ತಿದ್ದಾರೆ. ಸ್ವಲ್ಪ ಸಮಯದ ಬಳಿಕ ಕೊರೊನಾ ಬಗ್ಗೆ ಜಾಗೃತಿ ನೀಡಿ ಕಳುಹಿಸುತ್ತಿದ್ದಾರೆ. ಬಹುತೇಕ ಪೊಲೀಸರು ಲಾಠಿ ಏಟು ನೀಡಿದ್ರೆ, ಕೆಲವರು ಬಸ್ಕಿ ಹೊಡೆಸುತ್ತಿದ್ದಾರೆ.

Leave a Reply