ಹಳ್ಳಿಗರ ನೆರವಿಗೆ ನಿಂತ ಶಾನ್ವಿ

ಬೆಂಗಳೂರು: ಶಾನ್ವಿ ಶ್ರೀವಾಸ್ತವ್ ಉತ್ತರ ಪ್ರದೇಶದ ವಾರಾಣಸಿಯವರಾದರೂ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದಾರೆ. ಈಗಾಗಲೇ ಸ್ಯಾಂಡಲ್‍ವುಡ್‍ನಲ್ಲಿ ಹತ್ತಾರು ಸಿನಿಮಾಗಳನ್ನು ಮಾಡುವ ಮೂಲಕ ಗುರುತಿಸಿಕೊಂಡಿರುವ ಶಾನ್ವಿ, ತಮ್ಮ ನಟನೆ ಮೂಲಕವೇ ಕನ್ನಡಿಗರನ್ನು ಸೆಳೆದಿದ್ದಾರೆ. ಸ್ಯಾಂಡಲ್‍ವುಡ್ ಪ್ರಸಿದ್ಧ ನಟರೊಂದಿಗೆ ಶಾನ್ವಿ ತೆರೆ ಹಂಚಿಕೊಂಡಿದ್ದು, ಇತ್ತೀಚೆಗೆ ಶ್ರೀಮನ್ನಾರಾಯಣ ಚಿತ್ರದಲ್ಲೂ ಮೋಡಿ ಮಾಡಿದ್ದಾರೆ.

ಹೀಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಅವರು, ತಾರಕ್, ಮಫ್ತಿ, ದಿ ವಿಲನ್ ಅವನೇ ಶ್ರೀಮನ್ನಾರಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅದೇ ರೀತಿ ಟಾಲಿವುಡ್‍ನಲ್ಲಿಯೂ ಗುರುತಿಸಿಕೊಂಡಿದ್ದು, ತೆಲುಗಿನಲ್ಲೂ ಕೆಲ ಚಿತ್ರಗಳಲ್ಲಿ ನಟಿಸಿದ್ದಾರೆ. ಹೀಗೆ ಸಾಲು ಸಾಲು ಹಿಟ್ ಸಿನಿಮಾಗಳಲ್ಲಿ ತೆರೆ ಹಂಚಿಕೊಳ್ಳುವ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇನ್ನೂ ಕೆಲಸ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ ಸಹ. ಆದರೆ ಇದೀಗ ಲಾಕ್‍ಡೌನ್ ಆಗಿರುವುದರಿಂದ ಮನೆಯಲ್ಲೇ ಕಾಲ ಕಳೆಯುತ್ತಿದ್ದಾರೆ.

ಕೊರೊನಾ ಮಹಾಮಾರಿ ವಿರುದ್ಧ ಹೋರಾಡಲು ಹಲವು ನಟ, ನಟಿಯರು ಹಲವು ರೀತಿಯಲ್ಲಿ ಸಹಾಯ ಮಾಡುತ್ತಿದ್ದು, ಅದೇ ರೀತಿ ಶಾನ್ವಿ ಸಹಾಯಕ್ಕೆ ಮುಂದಾಗಿದ್ದಾರೆ. ಫೇಸ್ಬುಕ್ ಮೂಲಕ ಸಹಾಯ ಮಾಡಲು ಮುಂದಾಗಿದ್ದು, ರೂರಲ್ ಹೆಲ್ತ್ ಕೇರ್ ಫೌಂಡೇಶನ್‍ನ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಫೇಸ್ಬುಕ್‍ನಲ್ಲಿ ಆನ್‍ಲೈನ್ ಮೂಲಕ ಇತರರು ದಾನ ನೀಡುವಂತೆ ಸಂಸ್ಥೆ ಮನವಿ ಮಾಡಿದ್ದು, ಗ್ರಾಮೀಣ ಭಾಗದ ಜನರಿಗೆ ನೇರವಾಗಿ ಸಹಾಯ ತಲುಪಬೇಕೆಂಬ ಉದ್ದೇಶದಿಂದ ಶಾನ್ವಿ ಈ ಸಂಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ತಮ್ಮ ಸ್ನೇಹಿತರು, ಅಭಿಮಾನಿಗಳೂ ಸಹ ದಾನ ನೀಡುವಂತೆ ಕರೆ ನೀಡಿದ್ದಾರೆ. ಈ ಮೂಲಕ ಫಂಡ್ ಸಂಗ್ರಹಕ್ಕೆ ಮುಂದಾಗಿದ್ದಾರೆ.

ಬಾಲಿವುಡ್, ಸ್ಯಾಂಡಲ್‍ವುಡ್‍ನಲ್ಲಿ ಹಲವು ನಟ, ನಟಿಯರು ನೇರವಾಗಿ ಕಾರ್ಮಿಕರಿಗೆ, ಬಡವರಿಗೆ ಹಣ ಹಾಗೂ ಆಹಾರ ಪದಾರ್ಥ ದಾನ ನೀಡುವ ಮೂಲಕ ಸಹಾಯ ಮಾಡುತ್ತಿದ್ದಾರೆ. ಅದೇ ರೀತಿ ಶಾನ್ವಿ ಅವರು ಫಂಡ್ ಸಂಗ್ರಹಿಸಲು ಮುಂದಾಗಿದ್ದಾರೆ. ಅಂದಹಾಗೆ ಶಾನ್ವಿ ಪ್ರಸ್ತುತ ರವಿಚಂದ್ರ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಲಾಕ್‍ಡೌನ್ ಹಿನ್ನೆಲೆ ಚಿತ್ರೀಕರಣ ಸ್ಥಗಿತಗೊಂಡಿದೆ.

Comments

Leave a Reply

Your email address will not be published. Required fields are marked *