ಕೊರೊನಾ ತಡೆ ಹೇಗೆ? ಸಾರ್ವಜನಿಕರಿಗೆ ಸಿಎಂ ಯಡಿಯೂರಪ್ಪ ಟಿಪ್ಸ್

ಬೆಂಗಳೂರು: ಕೊರೊನಾ ವೈರಸ್ ಹೇಗೆ ತಡೆಯಬೇಕೆಂದು ಸಾರ್ವಜನಿಕರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ವಿಡಿಯೋ ಮೂಲಕ ಟಿಪ್ಸ್ ನೀಡಿದ್ದಾರೆ.

ಕೊರೊನಾ ವೈರಸ್ ಸೋಂಕು ರಾಜ್ಯಾದ್ಯಂತ ವ್ಯಾಪಕವಾಗಿ ಹರಡುತ್ತಿದೆ. ಕೊರೊನಾ ಸೋಂಕು ಹರಡದಂತೆ ಸರ್ಕಾರ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನನ್ನ ಕೈಗೊಂಡಿದೆ. ಕೊರೊನಾ ನಿಯಂತ್ರನ್ಕ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿದರೆ ಆತಂಕ ಪಡುವ ಅಗತ್ಯವಿಲ್ಲ. ಆದರೂ ರಾಜ್ಯದ ಜನರಲ್ಲಿ ಕೊರೋನಾ ಆತಂಕ ಹೆಚ್ಚಾಗುತ್ತಲೇ ಇದೆ.

ಈ ಮಧ್ಯೆ ಖುದ್ದು ರಾಜ್ಯದ ಮುಖ್ಯಮಂತ್ರಿಗಳೇ ಸಾರ್ವಜನಿಕರ ಆತಂಕ ದೂರ ಮಾಡಲು ಮುಂದಾಗಿದ್ದಾರೆ. ಸಿಎಂ ಯಡಿಯೂರಪ್ಪರವರು ಆರೋಗ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳುವ ಮೂಲಕ ಕೊರೊನಾ ಸೋಂಕನ್ನು ಹೇಗೆ ತಡೆಗಟ್ಟಬಹುದೆಂದು ವಿಡಿಯೋ ಸಂದೇಶದ ಮೂಲಕ ಒಂದಷ್ಟು ಅಮೂಲ್ಯ ಟಿಪ್ಸ್ ಗಳನ್ನು ಹೇಳಿದ್ದಾರೆ. ಆತಂಕ ಪಡದೇ ಕೊರೊನಾ ನಿಯಂತ್ರಣಕ್ಕೆ ಸಹಕರಿಸಬೇಕು ಎಂದು ರಾಜ್ಯದ ಜನರಲ್ಲಿ ಸಿಎಂ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ತಡೆಗೆ ಸಿಎಂ ಟಿಪ್ಸ್-ಸಾರ್ವಜನಿಕರಿಗೆ ಸಿಎಂ ವಿಡಿಯೋ ಸಂದೇ

1. ಜನ ಜಂಗುಳಿಯಿಂದ ದೂರವಿರಿ.
2. ಆದಷ್ಟು ಮನೆಯಲ್ಲೇ ಇರಿ, ಅಗತ್ಯ ಇದ್ದರೆ ಮಾತ್ರ ಹೊರಗೆ ಬನ್ನಿ.
3. ಕೈಗಳನ್ನು ಚೆನ್ನಾಗಿ ಆಗಾಗ್ಗೆ ಸೋಪಿನಲ್ಲಿ ತೊಳೆಯುತ್ತಿರಿ.
4. ಶುದ್ಧ ಕುಡಿಯುವ ನೀರನ್ನೇ ಕುಡಿಯಿರಿ
5. ಯಾವುದೇ ದೊಡ್ಡ ಸಮಾವೇಶ, ಸಮಾರಂಭ ಆಯೋಜಿಸಬೇಡಿ.
6. ವಿದೇಶಗಳಿಂದ ಹಿಂತಿರುಗಿದರೆ ಆರೋಗ್ಯ ಇಲಾಖೆಗೆ ಖಂಡಿತಾ ಮಾಹಿತಿ ನೀಡಿ.
7. ಕೆಮ್ಮು, ನೆಗಡಿ, ಜ್ವರ, ಗಂಟಲು ಉರಿಯೂತ ಕಂಡು ಬಂದರೆ ತಕ್ಷಣವೇ ವೈದ್ಯರನ್ನು ಕಾಣಿರಿ.
8. ಕೊರೊನಾ ದೃಡಪಟ್ಟರೆ 14 ದಿನ ಪ್ರತ್ಯೇಕವಾಗಿರಿ, ಕಡ್ಡಾಯ ಚಿಕಿತ್ಸೆ ಪಡೆಯಿರಿ.
9. ಯಾರೂ ಭಯಭೀತರಾಗಬೇಡಿ, ಸರ್ಕಾರ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಂಡಿದೆ.
10. ಸುಳ್ಳು ವದಂತಿಗಳಿಗೆ ಕಿವಿಗೊಡಬೇಡಿ, ಸರ್ಕಾರದ ಮಾಹಿತಿಯನ್ನಷ್ಟೇ ನಂಬಿ.

Comments

Leave a Reply

Your email address will not be published. Required fields are marked *