ಕೊರೊನಾ ಎಫೆಕ್ಟ್- ರಾಜ್ಯದಲ್ಲಿ ಚಿಕನ್ ಉದ್ಯಮಕ್ಕೆ ಪ್ರತಿ ದಿನ 15 ಕೋಟಿ ನಷ್ಟ

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪರಿಣಾಮವು ಕುಕ್ಕಟೋದ್ಯಮದ ಮೇಲೂ ಬೀರಿದ್ದು, ಪ್ರತಿ ದಿನಕ್ಕೆ ಕರ್ನಾಟಕದಲ್ಲಿ 15 ಕೋಟಿ ರೂ. ನಷ್ಟವಾಗುತ್ತಿದೆ. ಅಂದ್ರೆ ತಿಂಗಳಿಗೆ ಅಂದಾಜು 500 ಕೋಟಿ ರೂ. ನಷ್ಟವಾಗುವ ಸಾಧ್ಯತೆ ಇದೆ.

ಶಾಸಕರ ಭವನದಲ್ಲಿ ಕರ್ನಾಟಕ ರಾಜ್ಯ ಕೋಳಿ ಸಾಕಾಣಿಕೆದಾರರ ಕ್ಷೇಮಾಭಿವೃದ್ಧಿ ಸಂಘದಿಂದ ಇಂದು ಬೆಳಗ್ಗೆ ಸಭೆ ನಡೆಯಿತು. ಈ ಸಭೆಯಲ್ಲಿ ಕೊರೊನಾ ವೈರಸ್‍ನಿಂದ ಕೋಳಿ ಸಾಕಾಣಿಕೆದಾರರಿಗೆ ಹಾಗೂ ಉತ್ಪಾದನೆಯಲ್ಲಿ ಎಷ್ಟು ಸಮಸ್ಯೆಯಾಗಿದೆ? ಎಷ್ಟು ನಷ್ಟವಾಗಿದೆ ಎಂಬುದರ ಬಗ್ಗೆ ಚರ್ಚಿಸಲಾಯಿತು.

ಭಾರತದಲ್ಲಿ ಕೊರೊನಾ ಭೀತಿಯಿಂದ ಒಟ್ಟು 5ರಿಂದ 6 ಸಾವಿರ ಕೋಟಿ ರೂ. ನಷ್ಟವಾಗಿದೆ. ಶೇ.70ರಿಂದ 80ರಷ್ಟು ಉದ್ಯಮಕ್ಕೆ ಹೊಡೆತ ಬಿದ್ದಿದೆ. ಒಂದು ತಿಂಗಳಿನಿಂದ ಉತ್ಪಾದನೆಯಲ್ಲಿ ಶೇ.40ರಿಂದ 70ರಷ್ಟು ಇಳಿಕೆಯಾಗಿದೆ. ಇದರಿಂದ ಕುಕ್ಕಟೋದ್ಯಮಕ್ಕೆ ಭಾರೀ ನಷ್ಟ ಉಂಟಾಗಿದ್ದು, ಹೀಗೆ ಮುಂದುವರಿದರೆ ಉದ್ಯಮ ನೆಲಕಚ್ಚಲಿದೆ ಅಂತ ಸಭೆಯಲ್ಲಿ ಆತಂಕ ವ್ಯಕ್ತಪಡಿಸಲಾಯಿತು.

ಈ ಕುರಿತು ಪ್ರತಿಕ್ರಿಯೆ ನೀಡಿದ ವೆಂಕಟೇಶ್ವರ ಆಚೂರಿಸ್ ಲಿಮಿಟೆಡ್ ಜನರಲ್ ಮ್ಯಾನೇಜರ್ ಮಂಜೇಶ್ ಕುಮಾರ್, ಪ್ರತಿ ದಿನಕ್ಕೆ ಕರ್ನಾಟಕದಲ್ಲಿ 15 ಕೋಟಿ ರೂ. ನಷ್ಟವಾಗುತ್ತಿದೆ. ಅಂದ್ರೆ ತಿಂಗಳಿಗೆ ಅಂದಾಜು 500 ಕೋಟಿ ರೂ. ನಷ್ಟವಾಗುತ್ತಿದೆ ಎಂದು ಮಾಹಿತಿ ನೀಡಿದರು.

Comments

Leave a Reply

Your email address will not be published. Required fields are marked *