ಲಸಿಕೆ ಪ್ರಮಾಣ ಪತ್ರ ಎಡವಟ್ಟು – ವ್ಯಾಕ್ಸಿನ್ ಪಡೆಯಲು ಬಂದಾತನಿಗೆ ಶಾಕ್

ಹುಬ್ಬಳ್ಳಿ: ಕೋವಿಡ್ ನಿರ್ವಹಣೆ ಜೊತೆಗೆ ಸರ್ಕಾರ ಕೆಲ ಎಡವಟ್ಟುಗಳನ್ನು ಮಾಡುತ್ತಲೇ ಬಂದಿದೆ. ವ್ಯಾಕ್ಸಿನ್ ಪಡೆಯಲೆಂದು ಬಂದಿದ್ದ ವ್ಯಕ್ತಿಗೆ ಲಸಿಕೆ ಪಡೆಯುವ ಮುನ್ನವೇ ಲಸಿಕೆ ಪ್ರಮಾಣ ಪತ್ರ ಬಂದಿರುವುದನ್ನು ಕಂಡು ಸಾರ್ವಜನಿಕರೊಬ್ಬರು ಆಶ್ಚರ್ಯಗೊಂಡಿದ್ದಾರೆ.

ಲಸಿಕೆ ಪಡೆಯದಿದ್ದರೂ ಸರ್ಟಿಫಿಕೇಟ್ ದೊರೆಯುತ್ತದೆ. ಕೆಲವರಿಗೆ ಕೋವಿಡ್ ಲಸಿಕೆ ಪಡೆದರೂ ಪ್ರಮಾಣಪತ್ರ ಬಾರದಿರುವ ಪ್ರಕರಣಗಳಿವೆ. ಆದರೆ ಇಲ್ಲಿ ವ್ಯಕ್ತಿಯೊಬ್ಬರು ಇನ್ನೂ ಲಸಿಕೆಯನ್ನೇ ಹಾಕಿಸಿಕೊಂಡಿಲ್ಲ. ಆಗಲೇ ಅವರ ಹೆಸರಿನಲ್ಲಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಪ್ರಮಾಣ ಪತ್ರ ಬಂದಿದೆ. ಸರ್ಕಾರದ ತಂತ್ರಾಂಶದ ದೋಷದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ. ಇದನ್ನೂ ಓದಿ: ಮುಂಚೂಣಿ ಕಾರ್ಯಕರ್ತರಾಗಿ 10 ತಿಂಗಳ ಬಳಿಕ ಲಸಿಕೆಯ ಮೊದಲ ಡೋಸ್‌ ಪಡೆದ ʼಮಹಾʼ ಸರ್ಕಾರದ ಸಿಎಸ್‌

ಹುಬ್ಬಳ್ಳಿಯ ಮಂಟೂರು ರೋಡ್ ನಿವಾಸಿ ಎಂ.ಎಸ್.ಸುಂದರ್ 30 ಜುಲೈ 2021ಕ್ಕೆ ಗಾಂಧಿವಾಡ ಲಸಿಕಾ ಕೇಂದ್ರದಲ್ಲಿ ಮೊದಲ ಡೋಸ್ ಲಸಿಕೆ ಪಡೆದಿದ್ದರು. 2ನೇ ಡೋಸ್ ಅಕ್ಟೋಬರ್‌ನಲ್ಲಿ ದಿನಾಂಕ ನೀಡಲಾಗಿತ್ತು. ಅನಿವಾರ್ಯ ಕಾರಣಗಳಿಂದಾಗಿ ಹೋಗಲು ಸಾಧ್ಯವಾಗಿಲ್ಲ. ಅದಕ್ಕಾಗಿ ಮತ್ತೆ ಇದೀಗ ಎರಡನೇ ಡೋಸ್ ಪಡೆಯಲು ರೈಲ್ವೇ ಆಸ್ಪತ್ರೆಗೆ ಹೋಗಿದ್ದಾರೆ. ಎರಡನೇ ಡೋಸ್ ಲಸಿಕೆ ಹಾಕುವಂತೆ ಸಿಬ್ಬಂದಿಗೆ ಮೊಬೈಲ್ ಮೆಸೇಜ್ ತೋರಿಸಿದ್ದಾರೆ. ಆಗ ವೈದ್ಯಕೀಯ ಸಿಬ್ಬಂದಿ ಅವರ ಮೊಬೈಲ್ ನಂಬರ್ ಕೋವಿಡ್ ತಂತ್ರಾಂಶದಲ್ಲಿ ಹಾಕುತ್ತಿದ್ದಂತೆ ನಿಮಗೆ ಈಗಾಗಲೇ ಎರಡನೇ ಡೋಸ್ ಆಗಿದೆ ಎಂದು ಹೇಳಿದ್ದಾರಲ್ಲದೇ, ಅವರ ಮೊಬೈಲ್‍ನಲ್ಲಿಯೇ ಪ್ರಮಾಣ ಪತ್ರ ಡೌನ್‍ಲೋಡ್ ಮಾಡಿ ತೋರಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಖಿನ್ನತೆಯಿಂದ ಮಡದಿ, ಮಕ್ಕಳನ್ನು ಕೊಂದ ವೈದ್ಯ

ಇದರಿಂದ ಸುಂದರ್ ಅವರಿಗೆ ಆಶ್ಚರ್ಯವಾಗಿದೆ. ನಾನು ಇನ್ನೂ ಎರಡನೇ ಡೋಸ್ ತೆಗೆದುಕೊಂಡಿಲ್ಲ. ಅದು ಹೇಗೆ ಪ್ರಮಾಣ ಪತ್ರ ಬರುತ್ತೆ ಎಂದು ಕೇಳಿದ್ದಾರೆ. ಲಸಿಕಾ ಕೇಂದ್ರದ ಸಿಬ್ಬಂದಿ ಅದು ಹೇಗೆ ಬಂದಿದೆ ನಮಗೆ ಗೊತ್ತಿಲ್ಲ. ನಿಮಗಂತೂ ಎರಡನೇ ಡೋಸ್ ಹಾಕಲು ಅವಕಾಶ ಇಲ್ಲ ಎಂದು ಹೇಳಿದ್ದಾರೆ. ನಂತರ ಸುಂದರ್ ಎರಡು ಡೋಸ್ ಹಾಕಿಸಿಕೊಂಡಿದ್ದರೆ ನಾನೇಕೆ ಮತ್ತೆ ಲಸಿಕೆ ತೆಗೆದುಕೊಳ್ಳಲು ಬರುತ್ತಿದ್ದೆ. ಸರ್ಕಾರವಾಗಲಿ, ವೈದ್ಯರಾಗಲಿ ಮೂರನೇ ಡೋಸ್‍ಗೆ ಅವಕಾಶ ನೀಡಿದ್ದಾರೆಯೇ? ನಾನೇಕೆ ಹೆಚ್ಚಿನ ಡೋಸ್ ಪಡೆಯಲಿ? ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಆತಂಕ ಬೇಡ- ಸೋಂಕಿತನ ಅಭಯ

Comments

Leave a Reply

Your email address will not be published. Required fields are marked *