ಮಹಾರಾಷ್ಟ್ರದಲ್ಲಿ ಕೊರೊನಾ ಉಲ್ಬಣ: ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್, ಹೆಚ್ಚಿದ ಆತಂಕ

ಬೆಳಗಾವಿ: ಮಹಾರಾಷ್ಟ್ರದಲ್ಲಿ ಮತ್ತೆ ಡೆಡ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ ಬೆಳಗಾವಿ ಜಿಲ್ಲಾಡಳಿತ ಡೋಂಟ್ ಕೇರ್ ಎನ್ನುತ್ತಿದೆ. ಯಾವುದೇ ರೀತಿಯ ಮುಂಜಾಗ್ರತಾ ಕ್ರಮಕೈಗೊಳ್ಳದ ಪರಿಣಾಮ ಕುಂದಾನಗರಿಯಲ್ಲಿಯೂ ಕೊರೊನಾ ಆತಂಕ ಮನೆ ಮಾಡಿದೆ.

ಬೆಳಗಾವಿ ಜಿಲ್ಲೆ ಮೂರು ರಾಜ್ಯಗಳ ಸಂಪರ್ಕಕೊಂಡಿಯಾಗಿದ್ದು, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯಗಳ ಗಡಿಗೆ ಹೊಂದಿಕೊಂಡಿದೆ. ಪ್ರಸ್ತುತ ಮಹಾರಾಷ್ಟ್ರದಲ್ಲಿ ಕೋವಿಡ್ 4ನೇ ಅಲೆಯ ಆತಂಕ ಶುರುವಾಗಿದೆ. ಕಳೆದ 24 ಗಂಟೆಯಲ್ಲಿ 2,701 ಕೋವಿಡ್ ಪ್ರಕರಣ ಪತ್ತೆಯಾಗಿದೆ. ಇದನ್ನೂ ಓದಿ: ನೂತನ ರಾಷ್ಟ್ರಪತಿ ಆಯ್ಕೆಗೆ ಚುನಾವಣೆ ದಿನಾಂಕ ಘೋಷಣೆ

ಮುಂಬೈ ಮಹಾನಗರವೊಂದರಲ್ಲೇ 1,765 ಪ್ರಕರಣಗಳು ಪತ್ತೆಯಾಗಿವೆ. ಮುಂಬೈನಲ್ಲೂ ಆಸ್ಪತ್ರೆಗೆ ದಾಖಲಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದ್ದು, ಈಗಾಗಲೇ ಮಹಾರಾಷ್ಟ್ರದಲ್ಲಿ ಮತ್ತೆ ಕೋವಿಡ್ ನಿಯಮ ಜಾರಿಯಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್ ತಾಂಡವವಾಡುತ್ತಿದ್ದರೂ, ಬೆಳಗಾವಿ ಜಿಲ್ಲಾಡಳಿತ ಯಾವುದೇ ಮುಂಜಾಗ್ರತಾ ಕ್ರಮಕೈಗೊಳ್ಳದ ಪರಿಣಾಮ ಮಹಾರಾಷ್ಟ್ರ ರಾಜ್ಯದಿಂದ ಜನರು ಬಿಂದಾಸ್ ಆಗಿ ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಇದನ್ನೂ ಓದಿ: ಎಂಟು ವರ್ಷಗಳಲ್ಲಿ ಭಾರತದ ಜೈವಿಕ ಆರ್ಥಿಕತೆ 8 ಪಟ್ಟು ಬೆಳೆದಿದೆ: ಪ್ರಧಾನಿ

ಇದರಿಂದಾಗಿ ರಾಜ್ಯದಲ್ಲೂ ಕೊರೊನಾ ಆತಂಕ ಮನೆ ಮಾಡಿದ್ದು, ಬೆಳಗಾವಿ ಜಿಲ್ಲಾಡಳಿತ ಇನ್ನಾದರೂ ಎಚ್ಚೆತ್ತುಕೊಳ್ಳಬೇಕು. ಗಡಿಭಾಗದಲ್ಲಿ ಚೆಕ್ ಪೋಸ್ಟ್ ತೆರೆದು ಕಟ್ಟುನಿಟ್ಟಿನ ಕ್ರಮಕೈಗೊಳ್ಳಿ ಎಂದು ಸಾರ್ವಜನಿಕರು ಒತ್ತಾಯಿಸಿದರು.

Comments

Leave a Reply

Your email address will not be published. Required fields are marked *