ಸೋಂಕು ಸ್ಥಿರವಾಗಿದ್ದು, ಕಂಟ್ರೋಲ್ ಮಾಡಲಾಗಿದೆ: ಕೋಲಾರ ಡಿಸಿ

ಕೋಲಾರ: ಜಿಲ್ಲೆಯಲ್ಲಿ 3ನೇ ಅಲೆ ಅಬ್ಬರ ಜೋರಾಗಿದ್ರು, 500ರ ಆಸುಪಾಸಿನಲ್ಲಿ ಸೋಂಕು ಕಾಣಿಸಿಕೊಳ್ಳುತ್ತಿದೆ. ಪರಿಣಾಮ ಕೊರೊನಾ ಸೋಂಕು ಜಿಲ್ಲೆಯಲ್ಲಿ ಸ್ಥಿರವಾಗಿದೆ ಎಂದು ಕೋಲಾರ ಪ್ರಭಾರ ಜಿಲ್ಲಾಧಿಕಾರಿ ಯುಕೇಶ್ ಕುಮಾರ್ ಹೇಳಿದ್ದಾರೆ.

ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರದಿಂದ ವಾರಕ್ಕೆ ಪಾಸಿಟಿವಿಟಿ ಪರಿಶೀಲಿಸುತ್ತಿದ್ದೇವೆ. ಕೋಲಾರ ಜಿಲ್ಲೆಯಲ್ಲಿ ಸೋಂಕು ಹರಡುವ ಪ್ರಭಾವ ಸ್ಥಿರವಾಗಿದ್ದು, ಅದರಂತೆ ಪಾಸಿಟಿವಿಟಿಯಲ್ಲಿ ನಮ್ಮ ಜಿಲ್ಲೆ ರಾಜ್ಯದಲ್ಲೇ 7ನೇ ಸ್ಥಾನ ಪಡೆದುಕೊಂಡಿದೆ. ನಾವು ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಿದ್ದೇವೆ. ಜಿಲ್ಲೆಯ ಎಲ್ಲ ಅಧಿಕಾರಿಗಳು ಸಹ ಕೊರೊನಾ ಸೋಂಕು ಕಟ್ಟಿ ಹಾಕಲು ಶ್ರಮಿಸುತ್ತಿದ್ದಾರೆ. ಸರ್ಕಾರದ ನಿರ್ದೇಶನದಂತೆ ಪ್ರತಿನಿತ್ಯ ದಂಡ ವಸೂಲಿ ಮಾಡಲಾಗುತ್ತಿದೆ ಎಂದು ವಿವರಿಸಿದರು. ಇದನ್ನೂ ಓದಿ: ಮಾಯಾವತಿ ಪ್ರಚಾರದಲ್ಲಿ ಸಕ್ರಿಯವಾಗಿಲ್ಲ ಯಾಕೆ – ಆಶ್ಚರ್ಯವಾಗ್ತಿದೆ ಎಂದ ಪ್ರಿಯಾಂಕಾ

ಜಿಲ್ಲೆಯ ಅದೃಷ್ಟ ಎಂಬಂತೆ 3ನೇ ಅಲೆಯಲ್ಲಿ ಯಾವುದೇ ರೀತಿಯ ಪ್ರಾಣಹಾನಿ ಸಂಭವಿಸಿಲ್ಲ. ಇಬ್ಬರು ಮಾತ್ರ ಐಸಿಯುನಲ್ಲಿದ್ದು, ಅವರು ಸಹ ಆರೋಗ್ಯವಾಗಿದ್ದಾರೆ ಎಂದು ತಿಳಿಸಿದರು.

ಶಾಲಾ, ಕಾಲೇಜು ಮಕ್ಕಳಿಗೆ ಹೆಚ್ಚಾಗಿ ಸೋಂಕು ಕಾಣಿಸಿಕೊಳ್ಳುತ್ತಿದೆ ಎನ್ನಲಾಗುತ್ತಿದ್ದು, ಅದಕ್ಕೆ ನಮ್ಮ ಪಾಲಿಸಿ ಸುಲಭವಾಗಿದೆ. ಎಲ್ಲ ಮಕ್ಕಳಿಗೂ ರಜೆ ನೀಡುವುದು ನಮ್ಮ ಉದ್ದೇಶವಲ್ಲ. ಬದಲಾಗಿ ಯಾವುದೇ ರೀತಿಯ ತುರ್ತು ನಿರ್ಧಾರ ಮಾಡುತ್ತಿಲ್ಲ. ಅದರ ಬದಲು ಸೋಂಕು ಬಂದ ಶಾಲಾ-ಕಾಲೇಜಿಗೆ ಮಾತ್ರ ರಜೆ ನೀಡಲಾಗುತ್ತಿದೆ. ಅದು ಸಹ ಅವಶ್ಯಕತೆ ಇದ್ದಲ್ಲಿ ಮಾತ್ರ ರಜೆ. ನಮ್ಮ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಆಹಾರ ಅರಸಿ ನಾಡಿಗೆ ಬಂದ ಆನೆ ವಿದ್ಯುತ್ ಶಾಕಿಗೆ ಬಲಿ

Comments

Leave a Reply

Your email address will not be published. Required fields are marked *