NEW YEAR ಬಾಡೂಟಕ್ಕೆ ಕುರಿ ಕದ್ದ ಎಎಸ್‌ಐ!

ಒಡಿಶಾ: ಹೊಸ ವರ್ಷದ ಪಾರ್ಟಿಯನ್ನು ಅದ್ದೂರಿಯಾಗಿ ಮಾಡಬೇಕು. ಭರ್ಜರಿ ಬಾಡೂಟವನ್ನು ಮಾಡಬೇಕು ಎನ್ನುವ ಆಸೆಯಿಂದ ಪೊಲೀಸ್ ಅಧಿಕಾರಿಯೊಬ್ಬರು ಕುರಿ ಕದ್ದಿರುವ  ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.

ಸುಮನ್ ಮಲ್ಲಿಕ್, ಕುರಿ ಕದ್ದ ಸಬ್ ಇನ್ಸ್‌ಪೆಕ್ಟರ್. ಇವರು ಒಡಿಶಾದ ಬಲಂಗೀರ್ ಜಿಲ್ಲೆಯ ಸಿಂಧೇಕೆಲಾ ಪೊಲೀಸ್ ಠಾಣೆಯಲ್ಲಿ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ತನ್ನ ಸ್ನೇಹಿತರೊಂದಿಗೆ ಸೇರಿ ಹೊಸ ವರ್ಷಕ್ಕೆ ಎರಡು ಮೇಕೆಗಳನ್ನು ಕದ್ದಿದ್ದಾರೆ. ಸಬ್ ಇನ್ಸ್‌ಪೆಕ್ಟರ್ ಕುರಿಯನ್ನು ಕದ್ದಿರುವ ವಿಚಾರ ಮೇಕೆಗಳ ಮಾಲೀಕರಿಗೆ ಗೊತ್ತಾಗಿದೆ. ಮೇಕೆಗಳನ್ನು ಬಿಟ್ಟುಬಿಡುವಂತೆ ಮನವಿ ಮಾಡಿದ್ದಾರೆ. ಆದರೆ ಒಪ್ಪದ ಸುಮನ್ ಮಲಿಕ್ ಹೊಸ ವರ್ಷಕ್ಕೆ ಮೇಕೆಗಳನ್ನು ಕಡಿದು ಭಾರಿ ಭೋಜನ ತಯಾರಿಸಿ, ಸವಿದಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಅನುಮತಿ ಇಲ್ಲದೇ ಯಾರೋ ಮನೆಯೊಳಗೆ ಬಂದರೆಂದು ತಪ್ಪಾಗಿ ಭಾವಿಸಿ ಮಗಳನ್ನೇ ಕೊಂದ ತಂದೆ!

ಅಸಮಾಧಾನಗೊಂಡ ಗ್ರಾಮಸ್ಥರು ಸಿಂಧೇಕೆಲಾ ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿದ್ದಾರೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬಲಂಗೀರ್ ಪೊಲೀಸ್ ವರಿಷ್ಠಾಧಿಕಾರಿಯು ಸುಮನ್ ಮಲ್ಲಿಕ್‍ನನ್ನು ಅಮಾನತುಗೊಳಿಸಿ, ತನಿಖೆಗೆ ಆದೇಶಿಸಿದ್ದಾರೆ. ಸ್ನೇಹಿತರ ಜೊತೆಗೆ ಪಾರ್ಟಿ ಮಾಡಲು ಹೋಗಿ ಸಬ್ ಇನ್ಸ್‌ಪೆಕ್ಟರ್ ಫಜೀತಿಗೆ ಸಿಲುಕಿಕೊಂಡಿದ್ದಾರೆ. ಇದನ್ನೂ ಓದಿ: ಮಾಜಿ ಸೈನಿಕರನ್ನು ಹತ್ಯೆಗೈದ ತಾಲಿಬಾನಿಗಳ ವಿರುದ್ಧ ಅಫ್ಘಾನ್ ಮಹಿಳೆಯರ ಪ್ರತಿಭಟನೆ

Comments

Leave a Reply

Your email address will not be published. Required fields are marked *