ಪೊದೆಯಲ್ಲಿ ಮಂಗಳಮುಖಿ ಜೊತೆ ಪೇದೆ ಸೆಕ್ಸ್ – ಯುವಕರು ರೆಕಾರ್ಡ್ ಮಾಡಿದ್ರು

ಚೆನ್ನೈ: ಕಾನೂನು ಪಾಠ ಹೇಳಬೇಕಾದ ಪೊಲೀಸ್ ಪೇದೆಯೊಬ್ಬ ಪೊದೆಯಲ್ಲಿ ಮಂಗಳಮುಖಿ ಜೊತೆ ಲೈಂಗಿಕ ಸಂಬಂಧ ಬೆಳೆಸಿದ್ದಕ್ಕೆ ಆತನನ್ನು ಈಗ ವರ್ಗಾವಣೆ ಮಾಡಲಾಗಿದೆ.

ಥೋರೈಪಕ್ಕಂ ಪೊಲೀಸ್ ಠಾಣೆಯ ಹೆಡ್ ಕಾನ್ ಸ್ಟೇಬಲ್ ಸತೀಶ್ ಸತ್ಯಾರಾಜ್ ಶನಿವಾರ ರಾತ್ರಿ ಪೊದೆಯ ಹಿಂದೆ ಮಂಗಳಮುಖಿ ಜೊತೆ ಸೆಕ್ಸ್ ಮಾಡಿದ್ದಾನೆ. ಲೈಂಗಿಕ ಸಂಬಂಧ ಬೆಳೆಸುತ್ತಿರುವ ವಿಡಿಯೋವನ್ನು ಯುವಕರ ಗುಂಪೊಂದು ರೆಕಾರ್ಡ್ ಮಾಡಿ ವೈರಲ್ ಮಾಡುತ್ತಿದ್ದಂತೆ ಪೇದೆಯನ್ನು ವರ್ಗಾವಣೆ ಮಾಡಲಾಗಿದೆ.

ಕೆಲ ದಿನಗಳಿಂದ ಪಲ್ಲಿಕಾರನಾಯ್ ಪ್ರದೇಶದಲ್ಲಿ ರಾತ್ರಿಯ ಸಮಯದಲ್ಲಿ ರಸ್ತೆಯಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದ್ದು, ಹಣಕ್ಕಾಗಿ ಕಿರುಕುಳ ನೀಡುತ್ತಿದ್ದರು. ಇದೇ ರಸ್ತೆಯಲ್ಲಿ ದರೋಡೆಯ ಪ್ರಕರಣಗಳು ನಡೆದಿವೆ. ನಾವು ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದೇವು. ಆದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಶನಿವಾರ ರಾತ್ರಿ ಯುವಕರ ಗುಂಪೊಂದು ಹೆಡ್ ಕಾನ್ ಸ್ಟೇಬಲ್ ರಸ್ತೆಯಲ್ಲಿ ನಿಂತಿದ್ದ ಮಂಗಳ ಮುಖಿಯರ ಜೊತೆ ಮಾತನಾಡುತ್ತಿರುವುದನ್ನು ನೋಡಿದ್ದಾರೆ. ಪೇದೆ ಸ್ವಲ್ಪ ಸಮಯದ ನಂತರ ಒಬ್ಬ ಮಂಗಳಮುಖಿಯನ್ನು ಕರೆದುಕೊಂಡು ಪೊದೆ ಹಿಂದೆ ಹೋಗಿ ಆಕೆಯ ಜೊತೆ ಸೆಕ್ಸ್ ನಲ್ಲಿ ತೊಡಗಿದ್ದಾನೆ. ಆಗ ಇದನ್ನು ಗಮಿಸಿದ ಯುವಕರು ವಿಡಿಯೋ ಮಾಡಿಕೊಂಡಿದ್ದಾರೆ.

ಯುವಕರು ವಿಡಿಯೋ ಮಾಡಿಕೊಂಡಿದ್ದನ್ನು ಪೊಲೀಸ್ ಪೇದೆ ನೋಡಿದ್ದು, ತಕ್ಷಣ ವಿಡಿಯೋ ಡಿಲೀಟ್ ಮಾಡುವಂತೆ ಹೇಳಿದ್ದಾನೆ. ಮುಂಗಳಮುಖಿ ಕೂಡ ವಿಡಿಯೋ ಡಿಲೀಟ್ ಮಾಡಲು ಪ್ರಯತ್ನಿಸಿದ್ದಾರೆ. ಆದರೆ ಯುವಕರು ಹೆಡ್ ಕಾನ್ ಸ್ಟೇಬಲ್ ನನ್ನು ಪಲ್ಲಿಕಾರನಾಯ್ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಿ ಒಪ್ಪಿಸಿದ್ದಾರೆ.

ಯುವಕರು ರೆಕಾರ್ಡ್ ಮಾಡಿದ್ದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಮಾಡಿದ್ದಾರೆ. ವಿಡಿಯೋ ವೈರಲ್ ಆದ ಬಳಿಕ ಪೇದೆಯನ್ನು ಬೇರೆ ಸ್ಥಳಕ್ಕೆ ವರ್ಗಾವಣೆ ಮಾಡಲಾಗಿದೆ. ಸದ್ಯಕ್ಕೆ ಈ ಕುರಿತು ಪೊಲೀಸ್ ಇಲಾಖೆ ತನಿಖೆ ನಡೆಸುತ್ತಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *