ಅಡುಗೆ ಎಣ್ಣೆ ಹೈಕ್ – ಗೃಹಿಣಿಯರಿಗೆ ಶಾಕ್ ಕೊಟ್ಟ ಸರ್ಕಾರ

ಬೆಂಗಳೂರು: ಪೆಟ್ರೋಲ್, ಡೀಸೆಲ್, ಅಕ್ಕಿ ಮತ್ತು ವಿದ್ಯುತ್ ದರ ಏರಿಸಿ ಸರ್ಕಾರ ಶಾಕ್ ಕೊಟ್ಟಿದ್ದು ಆಯ್ತು. ಇದೀಗ ಅಡುಗೆ ಎಣ್ಣೆಯ ಬೆಲೆ ಹೆಚ್ಚು ಮಾಡಿದ್ದಾರೆ.

ಪ್ರತಿದಿನ ದರ ಏರಿಕೆ ಭಯದಲ್ಲಿ ಜೀವನ ನಡೆಸುತ್ತಿರುವ ಮಧ್ಯಮ ಹಾಗೂ ಬಡ ಕುಟುಂಬಗಳಿಗೆ ಅಡುಗೆ ಎಣ್ಣೆ ದರ ಏರಿಕೆ ಮಾಡಿ ಶಾಕ್ ನೀಡಿದೆ. ಎಣ್ಣೆ ಇಲ್ಲದೆ ಒಗ್ಗರಣೆ ಸಹ ಹಾಕೋದಕ್ಕೆ ಆಗೋದಿಲ್ಲ. ಅಂತದ್ರಲ್ಲಿ ಅಡುಗೆ ಮನೆಯಲ್ಲಿ ಅತೀ ಹೆಚ್ಚು ಬಳಕೆಯಾಗುವ ಸನ್ ಫ್ಯೂರ್, ಜೆಮಿನಿ, ಗೋಲ್ಡ್ ವಿನ್ನರ್ ಸೇರಿದಂತೆ ದೀಪಕ್ಕೆ ಬಳಸುವ ಎಣ್ಣೆ ಬೆಲೆ ಸಹ ಒಂದೇ ವಾರದಲ್ಲಿ 10 ರಿಂದ 12 ರೂಪಾಯಿ ಹೆಚ್ಚಳವಾಗಿದೆ. ಅಡುಗೆ ತೈಲದ ಮೇಲೆ ಆಮದು ಸುಂಕ ಹೆಚ್ಚಾಗಿರುವುದೆ ದರ ಹೆಚ್ಚಳಕ್ಕೆ ಕಾರಣ ಎನ್ನಲಾಗುತ್ತಿದೆ.

ಯಾವ ಯಾವ ಎಣ್ಣೆ, ದರ ಎಷ್ಟು?

ಅಡುಗೆ ಎಣ್ಣೆ                               ಹಳೆ ದರ                          ಹೊಸ ದರ
ಸನ್‍ಫ್ಯೂರ್                                 88ರೂ.                           98ರೂ.
ಗೋಲ್ಡ್ ವಿನರ್                            89ರೂ.                           100ರೂ.
ಜೆಮಿನಿ                                       88ರೂ.                           100ರೂ.
ಹಿಮಾಮಿ ಹೆಲ್ತಿ ಅಂಡ್ ಟೇಸ್ಟೀ         85ರೂ.                           95ರೂ.
ಕಡಲೆಕಾಯಿ ಎಣ್ಣೆ                         84ರೂ.                           95ರೂ.
ದೀಪದ ಎಣ್ಣೆ                               72ರೂ.                            85ರೂ.

ಅಡಿಗೆ ಎಣ್ಣೆ ರೇಟ್ ಹೈಕ್‍ನಿಂದ ಎಣ್ಣೆ ಕೊಳ್ಳುವುದಕ್ಕೆ ಬಂದ ಗೃಹಿಣಿಯರು ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಪೆಟ್ರೋಲ್ ರೇಟ್ ಹೈಕ್ ಆದರೆ ಪ್ರೊಟೆಸ್ಟ್ ಮಾಡುತ್ತಾರೆ ನಮ್ಮ ಕಷ್ಟ ಕೇಳುವವರು ಯಾರು ಅಂತ ಗೃಹಿಣಿಯರು ಪ್ರಶ್ನೆ ಮಾಡುತ್ತಾ ಇದ್ದಾರೆ.

ರೀಟೈಲ್ ನಲ್ಲಿ ಈ ದರವಿದ್ದು, ಮಾಲ್ ಗಳಲ್ಲಿ ಅಡುಗೆ ತೈಲದ ರೇಟ್ 100ರ ಗಡಿ ದಾಟಿದೆ.

Comments

Leave a Reply

Your email address will not be published. Required fields are marked *