ಗುತ್ತಿಗೆದಾರರಿಂದ ಕಮಿಷನ್ ಆರೋಪ – `ಕೈ’ ಸರ್ಕಾರದ ವಿರುದ್ಧ ಜೆಡಿಎಸ್ ವಾಗ್ದಾಳಿ

ಬೆಂಗಳೂರು: ಗುತ್ತಿಗೆದಾರರ ಸಂಘದಿಂದ ಕಾಂಗ್ರೆಸ್ ಸರ್ಕಾರ (Congress Government) ಕಮಿಷನ್ ಪಡೆದಿದೆ ಎಂಬ ಆರೋಪಕ್ಕೆ ಸರ್ಕಾರದ ವಿರುದ್ಧ ಜೆಡಿಎಸ್ ಕಿಡಿಕಾರಿದೆ. `ಪಬ್ಲಿಕ್ ಟಿವಿ’ ವರದಿ ಉಲ್ಲೇಖಿಸಿದ ಜೆಡಿಎಸ್ (JDS), ಕಾಂಗ್ರೆಸ್ (Congress) ವಿರುದ್ಧ 60% ಸರ್ಕಾರ ಎಂದು ವಾಗ್ದಾಳಿ ನಡೆಸಿದೆ.

ಎಕ್ಸ್‌ನಲ್ಲಿ ಏನಿದೆ?
60% ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಗುತ್ತಿಗೆದಾರರ ಸಂಘ ಮತ್ತೆ ಪತ್ರ ಬರೆದಿದೆ. ಕಮಿಷನ್ ಕಾಂಗ್ರೆಸ್ ಸರ್ಕಾರದ ಹಗರಣಗಳು, ಕಿಕ್ ಬ್ಯಾಕ್ ಸಿದ್ದರಾಮಯ್ಯ (Siddaramaiah) ತಂಡದ “ಊಸರವಳ್ಳಿ ನಾಟಕಗಳು” ಸರಣಿ ರೂಪದಲ್ಲಿ ಅನಾವರಣಗೊಳ್ಳುತ್ತಿದೆ.ಇದನ್ನೂ ಓದಿ: ಕೊನೆಗೂ ಭಾರತಕ್ಕೆ ಬಂದ ಮುಂಬೈ ದಾಳಿ ಉಗ್ರ ರಾಣಾ

ಕಾಂಗ್ರೆಸ್ ಸರ್ಕಾರದ 60% ಕಮಿಷನ್ ದಾಹ ಇನ್ನೂ ತಣಿದಿಲ್ಲ. ಗುತ್ತಿಗೆದಾರರಿಗೆ ಬಾಕಿ ಹಣ ಬಿಡುಗಡೆ ಮಾಡುತ್ತಿಲ್ಲ. ಇದಕ್ಕೆ ಸಂಘ ಬರೆದಿರುವ ಪತ್ರವೇ ಸಾಕ್ಷಿ. PWD ಇಲಾಖೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ಕುಟುಂಬ ಮತ್ತು ಸಣ್ಣ ನೀರಾವರಿ ಇಲಾಖೆಯಲ್ಲಿ ಸಚಿವ ಬೋಸರಾಜು (NS Bosaraju) ಅವರ ಮಗ ಕಮಿಷನ್ ದಂಧೆಯಲ್ಲಿ ತೊಡಗಿದ್ದಾರೆ.

ಪ್ರತಿಯೊಂದು ಬಿಲ್ ಬಿಡುಗಡೆಗೂ ಇಂತಿಷ್ಟು ಕಮಿಷನ್ ಕೊಡಲೇಬೇಕು ಎಂಬ ಅಲಿಖಿತ ನಿಯಮ ಜಾರಿಗೊಳಿಸಿದ್ದಾರೆ ಎಂದು ಸ್ವತಃ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಂಜುನಾಥ್ ಆರೋಪಿಸಿದ್ದಾರೆ ಎಂದು ಕಿಡಿಕಾರಿದೆ.ಇದನ್ನೂ ಓದಿ: ಮುಂಬೈ ದಾಳಿಕೋರ ರಾಣಾ ತನ್ನ ಪ್ರಜೆಯಲ್ಲ – ದಿಢೀರ್‌ ಪಾಕ್‌ ಸ್ಪಷ್ಟನೆ