ಶೀಘ್ರವೇ ಈಶ್ವರಪ್ಪನವರ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತೆ: ಅರುಣ್ ಸಿಂಗ್

ಬೆಳಗಾವಿ: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಕೆ.ಎಸ್.ಈಶ್ವರಪ್ಪ ಅವರ ಮೇಲೆ ಆರೋಪ ಕೇಳಿಬಂದಿದ್ದು, ಅವರ ರಾಜೀನಾಮೆ ಬಗ್ಗೆ ಶೀಘ್ರವೇ ತೀರ್ಮಾನ ಕೈಗೊಳ್ಳಲಾಗುವುದು ಎಂದ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಿಳಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇನ್ನೂ ಪ್ರಕರಣದ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಹ ತನಿಖೆ ನಡೆಸುತ್ತಿದ್ದಾರೆ. 40% ಕಮಿಷನ್ ವಿಚಾರದ ಹಿಂದೆ ಹಲವಾರು ಆ್ಯಂಗಲ್ಸ್‌ಗಳಿವೆ. ಶೀಘ್ರದಲ್ಲಿಯೇ ಈಶ್ವರಪ್ಪನವರ ರಾಜೀನಾಮೆ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.

ಕರ್ನಾಟಕದಲ್ಲಿ ನಡೆದಿರುವುದು ಸಣ್ಣ ಘಟನೆಯಲ್ಲ. ಇದರ ಹಿಂದೆ ಖಂಡಿತವಾಗಿಯೂ ದೊಡ್ಡ ಕೈವಾಡವಿದ್ದು, ಸಾವಿನ ಮನೆಯಲ್ಲಿ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ ಆರೋಪಿಸಿದರು. ಇದನ್ನೂ ಓದಿ: ಮುಖಾಮುಖಿ ಭೇಟಿಯಾದ ನಂತರವಷ್ಟೇ ಈಶ್ವರಪ್ಪ ರಾಜೀನಾಮೆ ನಿರ್ಧಾರ: ಬೊಮ್ಮಾಯಿ

ರಾಜಸ್ಥಾನದಲ್ಲಿ ದಲಿತರ ಹತ್ಯೆಯಾಗಿದೆ. ರಾಜಸ್ಥಾನದ ಕರೋಲಿಯಲ್ಲಿ ಆಂಬುಲೇನ್ಸ್‍ನಲ್ಲಿ ಮಹಿಳೆಯರ ಕೊಲೆ ಹಾಗೂ ಅತ್ಯಾಚಾರ ನಡೆದಿದೆ. ರಾಜಸ್ಥಾನದ ಘಟನೆಗಳನ್ನು ಪ್ರಸ್ತಾಪಿಸಿ ಕಾಂಗ್ರೆಸ್‍ಗೆ ತಿರುಗೇಟು ನೀಡಿದರು. ದವಲಪುರ, ಸವಾಯಿ ಮಾಧವಪೂರದಲ್ಲಿ ದುರ್ಘಟನೆಗಳು ನಡೆದರೂ ಅಲ್ಲಿಗೆ ಸುರ್ಜೇವಾಲ ಭೇಟಿ ನೀಡಿಲ್ಲ. ಸುರ್ಜೇವಾಲ ಇಲ್ಲಿಗೆ ಬರೋದು ಬಿಟ್ಟು ಮೊದಲು ರಾಜಸ್ಥಾನಕ್ಕೆ ಹೋಗಬೇಕಿದೆ. ಪ್ರೀಯಾಂಕಾ ಗಾಂಧಿ ಘಟನೆ ನಡೆದ ಸ್ಥಳದಿಂದ ಕೊಂಚ ದೂರವಿದ್ದರೂ ಸಹ ಅವರೂ ಭೇಟಿ ನೀಡಿಲ್ಲ ಎಂದರು. ಇದನ್ನೂ ಓದಿ: ಯಾವುದೇ ಕಾರಣಕ್ಕೂ ಈಶ್ವರಪ್ಪ ರಾಜೀನಾಮೆ ಕೊಡಬಾರದು: ಸಚಿವ ನಿರಾಣಿ

Comments

Leave a Reply

Your email address will not be published. Required fields are marked *