ಮದ್ಯನಾದ್ರೂ ಸೇವಿಸಿ, ಗುಟ್ಕಾ ಬೇಕಾದ್ರೂ ತಿನ್ನಿ – ಬಿಜೆಪಿ ಸಂಸದನ ವಿವಾದಾತ್ಮಕ ಹೇಳಿಕೆ

ಭೋಪಾಲ್: ಮದ್ಯಪಾನ (Liquor) ಬೇಕಾದರೂ ಮಾಡಿ, ಗುಟ್ಕಾ (Gutka) ಬೇಕಾದರೂ ತಿನ್ನಿ, ಅಯೋಡೆಕ್ಸ್‌ನಾದ್ರೂ ತಿನ್ನಿ ಆದರೆ, ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ನೀರಿನ ಸಂರಕ್ಷಣೆ ಕುರಿತಂತೆ ಸಲಹೆ ನೀಡುವ ಭರದಲ್ಲಿ ಬಿಜೆಪಿ (Bharatiya Janata Party) ಸಂಸದ ಜನಾರ್ದನ್ ಮಿಶ್ರಾ (Janardan Mishra) ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಭಾನುವಾರ ಜಿಲ್ಲೆಯ ರೇವಾದ (Rewa) ಕೃಷ್ಣರಾಜ್ ಕಪೂರ್ ಸಭಾಂಗಣದಲ್ಲಿ (Krishnaraj Kapoor Auditorium) ಜಲ ಸಂರಕ್ಷಣೆ ಕುರಿತಂತೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಮೀನುಗಳು ನೀರಿನಿಂದ ಬತ್ತಿ ಹೋಗುತ್ತಿದ್ದು, ಅವುಗಳನ್ನು ಉಳಿಸಬೇಕು. ನೀವು ಗುಟ್ಕಾನಾದ್ರೂ ತಿನ್ನಿ, ಮದ್ಯನಾದ್ರೂ ಸೇವಿಸಿ, ವಾಸನೆ ಬರುವ ಅಯೋಡೆಕ್ಸ್ ಆದ್ರೂ ತಿನ್ನಿ, ಆದರೆ ನೀರಿನ ಮಹತ್ವವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ನೆಟ್ ಪ್ರಾಕ್ಟೀಸ್ ವೇಳೆ ರೋಹಿತ್ ಶರ್ಮಾ ಬಲಗೈಗೆ ಪೆಟ್ಟು – ಟೀಂ ಇಂಡಿಯಾಗೆ ಆಘಾತ

ಇದೇ ವೇಳೆ ಯಾವುದಾದರೂ ಸರ್ಕಾರ ನೀರಿನ ತೆರಿಗೆಯನ್ನು ಮನ್ನಾ ಮಾಡಲು ಘೋಷಿಸಿದರೆ ನಾವು ನೀರಿನ ತೆರಿಗೆಯನ್ನು ಪಾವತಿಸುತ್ತೇವೆ ಮತ್ತು ನೀವು ವಿದ್ಯುತ್ ಬಿಲ್ ಸೇರಿದಂತೆ ಉಳಿದ ತೆರಿಗೆಗಳಿಂದಲೂ ರಿಲೀಫ್ ಪಡೆದುಕೊಳ್ಳಬಹುದು ಎಂದಿದ್ದಾರೆ. ಇದನ್ನೂ ಓದಿ: ಬಾಲಕಿಯರ ಶೌಚಾಲಯವನ್ನು ಬರಿಗೈಯಲ್ಲೇ ಸ್ವಚ್ಛಗೊಳಿಸಿದ ಬಿಜೆಪಿ MP

ಜನಾರ್ದನ್ ಮಿಶ್ರಾ ಅವರು ಸುದ್ದಿಯಾಗುತ್ತಿರುವುದು ಇದೇ ಮೊದಲೆನಲ್ಲ, ಈ ಹಿಂದೆ ಬಾಲಕಿಯರ ಶಾಲೆಯ ಶೌಚಾಲಯದ ಅನೈರ್ಮಲ್ಯವನ್ನು ಗಮನಿಸಿ ಅದನ್ನು ಬರಿಗೈಯಲ್ಲಿ ಸ್ವಚ್ಛಗೊಳಿಸಿದ್ದರು. ಅಲ್ಲದೇ , ಸ್ವಚ್ಛತೆ ಮತ್ತು ಶುಚಿತ್ವವನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯ. ಇದು ಮಹಾತ್ಮ ಗಾಂಧಿ ಮತ್ತು ಪ್ರಧಾನಿ ಮೋದಿಯವರ ಸಂದೇಶವಾಗಿದೆ. ಇಂತಹ ಸ್ವಚ್ಛತಾ ಅಭಿಯಾನದಲ್ಲಿ ಭಾಗವಹಿಸಿದ್ದು ಇದೇ ಮೊದಲಲ್ಲ ಎಂದಿದ್ದರು. ಈ ವೀಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *