ಉದ್ಘಾಟನೆಗೂ ಮುಂಚೆ ಬಿತ್ತು ಸಚಿವ ರೇವಣ್ಣರ ಊರಿನ ರೈಲ್ವೇ ಮೇಲ್ಸೇತುವೆ

ಹಾಸನ: ಉದ್ಘಾಟನೆಗೆ ಸಿದ್ಧವಾಗಿರೋ ರೈಲ್ವೇ ಮೇಲ್ಸೇತುವೆಯ ತಡೆಗೋಡೆ ಕುಸಿದಿರುವ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹಂಗರಹಳ್ಳಿಯಲ್ಲಿ ನಡೆದಿದೆ.

ನೂತನ ಫ್ಲೈಓವರ್ ಇದಾಗಿದ್ದು, ಕೆಲ ತಿಂಗಳ ಹಿಂದೆ ರೈಲ್ವೆ ಮೇಲ್ಸೇತುವೆ ತಡೆಗೋಡೆ ಒಂದು ಬಾರಿ ಮೊದಲೇ ಕುಸಿದು ಬಿದ್ದಿತ್ತು. ಆದರೆ ಪಕ್ಕದ ಎಡಭಾಗದಲ್ಲಿ 2 ನೇ ಬಾರಿಗೆ ಕುಸಿದಿದೆ. ಇದರಿಂದಾಗಿ ಸ್ಥಳೀಯರು ಮತ್ತು ಪ್ರಯಾಣಿಕರು ಹೆಚ್ಚಿನ ಆತಂಕ ಪಡುತ್ತಿದ್ದಾರೆ.

ಸೇತುವೆಯ ಗೋಡೆಗಳು ಕುಸಿತವಾಗಿದ್ದು, ಸಾರ್ವಜನಿಕರಿಗೆ ಕಾಣಬಾರದೆಂದು ಟಾರ್ಪಲ್ ಅಳವಡಿಕೆ ಮಾಡಲಾಗಿದೆ. ಉದ್ಘಾಟನೆಗೂ ಮುನ್ನವೇ ಮೇಲ್ಸೇತುವೆ ಕುಸಿತಕೊಂಡಿದ್ದು ಕಳೆಪೆ ಕಾಮಾಗಾರಿಗೆ ಉದಾಹರಣೆಯಾಗಿದೆ. ಇನ್ನು ಗೋಡೆ ಕುಸಿತದ ವೇಳೆಯಲ್ಲಿ ಯಾವುದೇ ವಾಹನಗಳು ಚಲಿಸುತ್ತಿರಲಿಲ್ಲ. ಹಾಗಾಗಿ ಅನಾಹುತವೊಂದು ತಪ್ಪಿದೆ.

Comments

Leave a Reply

Your email address will not be published. Required fields are marked *