ಕೃಷಿ ಕ್ಷೇತ್ರವನ್ನು ಕಾರ್ಪೋರೇಟ್‌ಗಳಿಗೆ ಹಂಚಲು ಕೇಂದ್ರ ಸಂಚು: ಕೆಸಿಆರ್

ಹೈದರಾಬಾದ್: ಕೃಷಿ ಕ್ಷೇತ್ರವನ್ನು ಕಾರ್ಪೊರೇಟ್‌ಗಳಿಗೆ ವಹಿಸಿ ರೈತರನ್ನು ಕೂಲಿ ಮಾಡಿಸುವ ಷಡ್ಯಂತರವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೃಷಿ ಕ್ಷೇತ್ರವನ್ನು ದುರ್ಬಲಗೊಳಿಸುತ್ತಿದೆ. ತಮ್ಮ ರಾಜ್ಯದ ರೈತರಿಂದ ಅಕ್ಕಿಯನ್ನು ಖರೀದಿಸಲು ಕೇಂದ್ರಕ್ಕೆ 24 ಗಂಟೆಗಳ ಕಾಲ ಗಡುವು ವಿಧಿಸುತ್ತೇವೆ. ಆದರೆ ಕೇಂದ್ರದ ಬಳಿ ಹಣವಿಲ್ಲವೇ ಅಥವಾ ಆಹಾರ ಧಾನ್ಯವನ್ನು ಖರೀದಿಸಲು ಪ್ರಧಾನಿಗೆ ಮನಸ್ಸಿಲ್ಲವೇ ಎಂದು ಕಿಡಿಕಾರಿದರು.

ಬ್ಯಾಂಕ್‍ಗಳನ್ನು ದಿವಾಳಿಯಾಗಲು ಬಿಟ್ಟವರನ್ನು ಸರ್ಕಾರ ರಕ್ಷಿಸುತ್ತದೆ. ಲಂಡನ್‍ನಲ್ಲಿ ಕಾರ್ಪೊರೇಟ್ ವಂಚಕರನ್ನು ರಕ್ಷಿಸಲು 10,000 ಕೋಟಿ ರೂ. ಖರ್ಚು ಮಾಡಲಾಗಿದೆ. ನಮ್ಮ ಬಳಿ ಈ ಬಗ್ಗೆ ದಾಖಲೆಗಳಿವೆ. ಅವುಗಳನ್ನು ಬಹಿರಂಗ ಪಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: XE ರೂಪಾಂತರಿಯನ್ನು ಎದುರಿಸಲು ಸರ್ಕಾರ ಸಿದ್ಧವಾಗಿದೆ: ಮಾ ಸುಬ್ರಮಣಿಯನ್

ನಾನು ಮತ್ತು ನನ್ನ ಮಂತ್ರಿಗಳು ಆಹಾರ ಧಾನ್ಯ ಖರೀದಿಸಲು ದೆಹಲಿಗೆ ಹೋಗಿದ್ದೆವು. ಆದರೆ ಅಲ್ಲಿ ಕೇಂದ್ರ ಸಚಿವರು ರೈತರು ಅವಮಾನಿಸಿದ್ದಾರೆ. ತೆಲಂಗಾಣ ಜನರು ಒಡೆದ ಅಕ್ಕಿ ತಿನ್ನುವಂತೆ ಹೇಳಿದ್ದಾರೆ. ಕೇಂದ್ರ ಮತ್ತು ದುರ್ಬಲ ರಾಜ್ಯಗಳನ್ನು ಹೊಂದುವುದು ಬಿಜೆಪಿ ತತ್ವವಾಗಿದೆ ಎಂದು ಟೀಕಿಸಿದರು. ಇದನ್ನೂ ಓದಿ: ಮೇ.3ರೊಳಗೆ ಮಸೀದಿಗಳಿಂದ ಧ್ವನಿವರ್ಧಕ ತೆರವುಗೊಳಿಸಿ: ಸರ್ಕಾರಕ್ಕೆ ರಾಜ್ ಠಾಕ್ರೆ ಗಡುವು

ಕೇಂದ್ರ ಆಹಾರ ಸಚಿವ ಪಿಯೂಷ್ ಗೋಯಲ್ ಅವರು ಇತ್ತೀಚೆಗೆ ತೆಲಂಗಾಣ ಸರ್ಕಾರವು ಭಾರತೀಯ ಆಹಾರ ನಿಗಮಕ್ಕೆ ಕಚ್ಚಾ ಅಕ್ಕಿಯನ್ನು ಪೂರೈಸುವುದಿಲ್ಲ ಎಂದು ಲಿಖಿತವಾಗಿ ನೀಡಿದ್ದಾರೆ ಎಂದು ಆರೋಪಿಸಿದರು.

Comments

Leave a Reply

Your email address will not be published. Required fields are marked *