ಬಳ್ಳಾರಿ: ಗೊಂದಲ ಮತ್ತು ಭಿನ್ನಾಭಿಪ್ರಾಯದ ನಡುವೆಯೂ ಬಳ್ಳಾರಿ ಮಹಾನಗರ ಪಾಲಿಕೆಯ ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಸತತ ಎರಡನೇ ಬಾರಿಗೆ ಪಾಲಿಕೆಯನ್ನು ಕಾಂಗ್ರೆಸ್ ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಗೆಲ್ಲಲು ಅಗತ್ಯ ಸದಸ್ಯರ ಬಲ ಇಲ್ಲದೇ ಇದ್ರೂ ಕಣಕ್ಕಿಳಿಯುವ ಮೂಲಕ ಬಿಜೆಪಿ ಭಾರಿ ಮುಖಭಂಗ ಅನುಭವಿಸಿದೆ. ಮೇಯರ್ ಆಗಿ 34ನೇ ವಾರ್ಡಿನ ರಾಜೇಶ್ವರಿ ಮತ್ತು ಉಪಮೇಯರ್ ಆಗಿ 37ನೇ ವಾರ್ಡಿನ ಮಲಾನ ಭೀ ಅಯ್ಕೆಯಾಗಿದ್ದಾರೆ. ಬಹುಮತ ಇಲ್ಲದೇ ಇದ್ರೂ ಮೇಯರ್ ಸ್ಥಾನಕ್ಕೆ ಬಿಜೆಪಿಯ ಸುರೇಖ ಮತ್ತು ಉಪಮೇಯರ್ ಸ್ಥಾನಕ್ಕೆ ಸ್ಪರ್ಧೆ ಮಾಡಿದ ಗೋವಿಂದ ರಾಜುಲು ಸೋಲು ಕಾಣಬೇಕಾಯಿತು. ಇದನ್ನೂ ಓದಿ: ಪಾವಗಡ ಬಸ್ ದುರಂತ – ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಿಸಿದ ಶ್ರೀರಾಮುಲು

ಒಟ್ಟು 39 ಸದಸ್ಯರ ಪೈಕಿ 21 ಕಾಂಗ್ರೆಸ್ ಮತ್ತು ಐದು ಪಕ್ಷೇತರರ ಬಲ ಇದ್ರೂ ಆಪರೇಷನ್ ಕಮಲದ ಭೀತಿಯಿಂದ ಕಳೆದ ನಾಲ್ಕು ದಿನಗಳ ಹಿಂದೆ ಎಲ್ಲ ಸದಸ್ಯರನ್ನು ಕಾಂಗ್ರೆಸ್ ಬೆಂಗಳೂರಿಗೆ ಶಿಫ್ಟ್ ಮಾಡಲಾಗಿತ್ತು. ಬೆಂಗಳೂರಿನಿಂದ ಶುಕ್ರವಾರ ತಡರಾತ್ರಿ ಬಳ್ಳಾರಿಗೆ ಬಂದಿದ್ರೂ ಇಂದು ಬೆಳಗ್ಗೆ ವರೆಗೆ ಎರಡು ಮೂರು ಗುಂಪುಗಳಲ್ಲಿ ಭಿನ್ನಾಭಿಪ್ರಾಯವಿತ್ತು. ಕೇವಲ 13 ಸದಸ್ಯರ ಬಲ ಇದ್ರೂ ಕೊನೆಯ ಕ್ಷಣದಲ್ಲಿ ಬದಲಾವಣೆ ನೀರಿಕ್ಷೆ ಮಾಡಿದ ಬಿಜೆಪಿಗೆ ಯಾವುದೇ ಲಾಭವಾಗಲಿಲ್ಲ. ಇದನ್ನೂ ಓದಿ: ಕೋಲಾರದ ಕ್ಲಾಕ್ ಟವರ್ ಮೇಲೆ 74 ವರ್ಷಗಳ ಬಳಿಕ ರಾರಾಜಿಸಿದ ತ್ರಿವರ್ಣ ಧ್ವಜ

ಪಾಲಿಕೆ ಚುನಾವಣೆಯಲ್ಲಿ ಶಾಸಕ ಸೋಮಶೇಖರ್ ರೆಡ್ಡಿ ಮಗ ಮತ್ತು ಶ್ರೀರಾಮುಲು ಸಹೋದರ ಮಾಜಿ ಸಂಸದ ಪಕೀರಪ್ಪ ಮಗಳು ಭಾರಿ ಅಂತರದಿಂದ ಸೋಲನ್ನು ಅನುಭವಿಸಿದ್ದರು. ಇದೀಗ ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿಯೂ ಹಿನ್ನಡೆಯಾಗಿರುವುದು ಬಳ್ಳಾರಿಯ ಬಿಜೆಪಿ ಪಾಳಯಕ್ಕೆ ಹಿನ್ನಡೆ ತರಿಸಿದೆ.

Leave a Reply