ರಾಜಸ್ಥಾನ ಚುನಾವಣೆಯಲ್ಲಿ ಜಯಭೇರಿ: ಶತಕ ಹೊಡೆದ ಕಾಂಗ್ರೆಸ್

ಜೈಪುರ: ರಾಜಸ್ಥಾನ ಚುನಾವಣೆಯಲ್ಲಿ ಕಾಂಗ್ರೆಸ್ ಶತಕ ಹೊಡೆದಿದೆ. ರಾಮ್‍ಗಢ್ ಕ್ಷೇತ್ರದ ಚುನಾವಣಾ ಫಲಿತಾಂಶದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಯಗಳಿಸಿದ್ದಾರೆ.

ರಾಜಸ್ಥಾನದ ರಾಮ್‍ಗರ್ ಕ್ಷೇತ್ರದಿಂದ ಕಾಂಗ್ರೆಸ್‍ನ ಶಫಿಯಾ ಜುಬೈರ್ ಖಾನ್ 12,228 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಜುಬೈರ್ ಖಾನ್ 83,311 ಮತಗಳನ್ನು ಪಡೆದರೆ ಸಮೀಪದ ಬಿಜೆಪಿ ಅಭ್ಯರ್ಥಿ ಸುವಂತ್ ಸಿಂಗ್ 71,083 ಮತಗಳನ್ನು ಪಡೆದರು.

ಪಂಚ ರಾಜ್ಯ ವಿಧಾನಸಭಾ ಚುನಾವಣೆಗೂ ಮುನ್ನ (ಡಿಸೆಂಬರ್ 7ರಂದು) ರಾಜಸ್ಥಾನದ ರಾಮಗಢ್ ಕ್ಷೇತ್ರದಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಲಕ್ಷ್ಮಣ್ ಸಿಂಗ್ ನಿಧರಾಗಿದ್ದರು. ಹೀಗಾಗಿ ರಾಮಗಢ್ ಕ್ಷೇತ್ರವನ್ನು ಹೊರತುಪಡಿಸಿ ಉಳಿದ 199 ಕ್ಷೇತ್ರಗಳ ಚುನಾವಣೆ 2018 ಡಿಸೆಂಬರ್ ನಲ್ಲಿ ನಡೆದಿತ್ತು.

ರಾಜಸ್ಥಾನದಲ್ಲಿ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕರ ಸಂಖ್ಯೆ 100ಕ್ಕೆ ಏರಿಕೆಯಾಗಿದೆ. ಒಟ್ಟು 200 ಕ್ಷೇತ್ರಗಳಿದ್ದು, ಅದರಲ್ಲಿ ಕಾಂಗ್ರೆಸ್ 100, ಬಿಎಸ್‍ಪಿ 6, ಬಿಟಿಪಿ 2, ಆರ್ ಎಲ್‍ಡಿಯ ಓರ್ವರ ಬೆಂಬಲ ಪಡೆದು ಸರ್ಕಾರ ರಚನೆ ಮಾಡಿವೆ. ಬಿಜೆಪಿಯು 73 ಶಾಸಕರ ಬಲವನ್ನು ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Comments

Leave a Reply

Your email address will not be published. Required fields are marked *