ಕಾಂಗ್ರೆಸ್‌ಗೆ 150 ಸ್ಥಾನಕ್ಕಿಂತ ಒಂದು ಸ್ಥಾನವೂ ಕಡಿಮೆ ಬರಬಾರದು: ರಾಹುಲ್ ಗಾಂಧಿ

RAHUL GANDHI

ಬೆಂಗಳೂರು: ರಾಜ್ಯದಲ್ಲಿ ನಡೆಯುವ ಮುಂದಿನ ಚುನಾವಣೆಯಲ್ಲಿ 150 ಸ್ಥಾನಕ್ಕಿಂತ ಒಂದು ಸ್ಥಾನವೂ ಕಡಿಮೆ ಬರಬಾರದು. ಇದು ನಾನು ನಿಮಗೆ ಕೊಡುತ್ತಿರುವ ಟಾಸ್ಕ್ ಎಂದು ಕಾಂಗ್ರೆಸ್ ನಾಯಕರಿಗೆ ಎಐಸಿಸಿ ನಾಯಕ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿರುವ ರಾಹುಲ್ ಗಾಂಧಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಕುರಿತಾಗಿ ಮಾತನಾಡಿ, ಕರ್ನಾಟಕ ಸ್ಪಿರಿಟ್ ಅಫ್ ಕಾಂಗ್ರೆಸ್ ಪಾರ್ಟಿ. ದೇಶ, ರಾಜ್ಯದಲ್ಲಿ ಬಿಜೆಪಿ ಸರ್ಕಾರಗಳಿವೆ. ಬಿಜೆಪಿ ಸರ್ಕಾರ ಹಣದ ಮೇಲೆ ಅಧಿಕಾರಕ್ಕೆ ಬಂದಿದೆ. ಪ್ರಸಕ್ತ ವಿಷಯಗಳನ್ನು ಜನರಿಗ ಮುಟ್ಟಿಸಿ. ಪಕ್ಷದಲ್ಲಿ ಯಾರು ಕೆಲಸ ಮಾಡ್ತಾರೆ, ಯಾರು ಮಾಡುತ್ತಿಲ್ಲ ಮೊದಲು ಪತ್ತೆ ಹಚ್ಚಿ. ಎಲ್ಲರೂ ನೀವು ನೆನಪಿಡಬೇಕು. ಟಿಕೆಟ್ ನಿಮಗೆ ಸುಲಭವಾಗಿ ಸಿಗುವುದಿಲ್ಲ. ಯಾರು ಪಕ್ಷಕ್ಕಾಗಿ ದುಡಿಯುತ್ತಾರೆ ಅವರಿಗೆ ಮಾತ್ರ. ಪಕ್ಷ ಸಂಘಟನೆ ಮಾಡುವವರಿಗೆ ಟಿಕೆಟ್ ಈ ಎಲ್ಲಾ ವಿಷಯಗಳನ್ನು ಕಾರ್ಯಕರ್ತರು ಜನರಿಗೆ ತಲುಪಿಸಿ. ಸರ್ಕಾರದ ವಿರುದ್ಧ ಹೋರಾಟಗಳನ್ನು ರೂಪಿಸಿ. ಕಾರ್ಯಕರ್ತರು ಈ ಕೆಲಸ ಮೊದಲು ಮಾಡಬೇಕು ಎಂದು ಮುಖಂಡರು ಮತ್ತು ಕಾರ್ಯಕರ್ತರಿಗೆ ರಾಹುಲ್ ಗಾಂಧಿ ಟಾಸ್ಕ್ ನೀಡಿದರು. ಇದನ್ನೂ ಓದಿ: ದೇಶದಲ್ಲೇ ಅತಿದೊಡ್ಡ ಭ್ರಷ್ಟ ಸರ್ಕಾರ ಕರ್ನಾಟಕದಲ್ಲಿದೆ: ರಾಹುಲ್ ಕಿಡಿ

ನೋಟ್ ಬ್ಯಾನ್, ವಿವಾದಾತ್ಮಕ ರೈತ ಕಾಯ್ದೆಗಳು. ಜಿಎಸ್‍ಟಿ ದೇಶದ ಜನರನ್ನು ಸಂಕಷ್ಟಕ್ಕೆ ದೂಡಿದವು. ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ಇದೆಲ್ಲವೂ ಆಯ್ತು. ದೇಶದಲ್ಲಿ ಉದ್ಯೋಗ ಸೃಷ್ಟಿಯಾಗ್ತಿಲ್ಲ. ಸಣ್ಣ ಪುಟ್ಟ ಕೈಗಾರಿಕೆಗಳು ಮುಚ್ಚಿಹೋಗಿವೆ. ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಪ್ರಧಾನಿ ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಿದ್ರು. ಈ ಹಿಂದೆ ಕರ್ನಾಟಕದಲ್ಲಿ ಭ್ರಷ್ಟಾಚಾರ ಇದೆ ಎಂದು ಆರೋಪಿಸಿದ್ರು. ಇವತ್ತು 40% ಸರ್ಕಾರ ಕರ್ನಾಟಕದಲ್ಲಿದೆ. ಈ ಆರೋಪ ಕಾಂಗ್ರೆಸ್ ಪಕ್ಷ ಮಾಡ್ತಿರೋದಲ್ಲ. ಬದಲಾಗಿ ಕಂಟ್ರಾಕ್ಟರ್ ಅಸೋಸಿಯೇಷನ್ ಮಾಡಿದೆ. ಇದರ ಬಗ್ಗೆ ಪ್ರಧಾನಿಯವರು ಚಕಾರವೆತ್ತುತ್ತಿಲ್ಲ ಎಂದು ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಹಿಜಬ್ ವಿಚಾರದಲ್ಲಿ ಆರ್‌ಎಸ್‌ಎಸ್‌, ಭಜರಂಗದಳ, ಎಸ್‍ಡಿಪಿಐ ಕುಮ್ಮಕ್ಕು ಇದೆ ಈ ಎಲ್ಲಾ ಸಂಘಟನೆಗಳನ್ನು ನಿಷೇಧಿಸಿ: ಸಿದ್ದರಾಮಯ್ಯ

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರವಿತ್ತು. ಆಗಿನ ಸರ್ಕಾರದ ಸಾಧನೆ ಉತ್ತಮವಾಗಿತ್ತು. ಇದೀಗ ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ನೀವಿಬ್ಬರೂ ಉತ್ತಮ ನಾಯಕರಿದ್ದೀರ. ನಿಮ್ಮಿಬ್ಬರ ಮೇಲೆ ಬಹಳಷ್ಟು ಜವಾಬ್ದಾರಿಯಿದೆ. ಆ ಜವಾಬ್ದಾರಿಯನ್ನು ನೀವು ಸಮರ್ಥವಾಗಿ ನಿಭಾಯಿಸಬೇಕು. 150 ಸೀಟುಗಳನ್ನು ಈ ಬಾರಿ ಗೆಲ್ಲಬೇಕು. ಸಿದ್ದರಾಮಯ್ಯ, ಡಿಕೆಶಿ, ಮಲ್ಲಿಕಾರ್ಜುನ ಖರ್ಗೆ ಅವರೇ ನಿಮ್ಮ ಬಗ್ಗೆ ನನಗೆ ಚೆನ್ನಾಗಿ ಗೊತ್ತಿದೆ. ನೀವು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಾನು ನೀವು ಕರೆದರೆ ಯಾವಾಗ ಬೇಕಾದರು ಬರುತ್ತೇನೆ. ನಾನು ರಾಜ್ಯದ ಮೂಲೆ ಮೂಲೆಗೂ ಬರುತ್ತೇನೆ ಎಂದರು.

Comments

Leave a Reply

Your email address will not be published. Required fields are marked *