ಆಡಳಿತ ಪಕ್ಷ ನಡೆಸುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರಪತಿ ದೇಶಕ್ಕೆ ಅಗತ್ಯವಿದೆ: ಸೋನಿಯಾ

ನವದೆಹಲಿ: ಮುಂಬರುವ ರಾಷ್ಟ್ರಪತಿ ಚುನಾವಣೆ ವಿಚಾರವಾಗಿ ಚರ್ಚೆ ನಡೆಸಲು ಕಾಂಗ್ರೆಸ್ ಹಂಗಾಮಿ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ಮತ್ತು ಟಿಎಂಸಿ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಸೇರಿದಂತೆ ಪ್ರತಿಪಕ್ಷ ನಾಯಕರನ್ನು ಸಂಪರ್ಕಿಸಿದ್ದಾರೆ.

ಸೋನಿಯಾ ಗಾಂಧಿ ಅವರು ಕೋವಿಡ್‍ನಿಂದ ಬಳಲುತ್ತಿರುವ ಕಾರಣ ಇತರ ನಾಯಕರೊಂದಿಗೆ ಸಭೆ ನಡೆಸಲು ವಿರೋಧ ಪಕ್ಷದ ನಾಯಕ (ಎಲ್‍ಒಪಿ) ಮಲ್ಲಿಕಾರ್ಜುನ್ ಖರ್ಗೆ ಅವರನ್ನು ನಿಯೋಜಿಸಿದ್ದಾರೆ.

ಸಂವಿಧಾನ, ಪ್ರಜಾಸತ್ತಾತ್ಮಕ ಸಂಸ್ಥೆಗಳು ಮತ್ತು ನಾಗರಿಕರ ಮೇಲೆ ಆಡಳಿತಾರೂಢ ಪಕ್ಷ ನಡೆಸುತ್ತಿರುವ ದೌರ್ಜನ್ಯದಿಂದ ರಕ್ಷಿಸುವ ರಾಷ್ಟ್ರಪತಿ ರಾಷ್ಟ್ರಕ್ಕೆ ಅಗತ್ಯವಿದೆ ಎಂದು ಕಾಂಗ್ರೆಸ್ ಅಭಿಪ್ರಾಯ ವ್ಯಕ್ತಪಡಿಸಿದೆ.

ಭಾರತದಲ್ಲಿ ಒಡೆದು ಹೋಗಿರುವ ಸಾಮಾಜಿಕತೆಯನ್ನು ಮತ್ತೆ ರಚಿಸುವಂತಹ ಸಾಮಾಥ್ರ್ಯವುಳ್ಳ ಅಧ್ಯಕ್ಷರನ್ನು ಜನ ಆಯ್ಕೆ ಮಾಡುತ್ತಾರೆ. ಚರ್ಚೆಗಳು ಮುಕ್ತ ಮನಸ್ಸಿನಿಂದ ಮತ್ತು ಉತ್ತಮ ಮನೋಭಾವಕ್ಕೆ ಅನುಗುಣವಾಗಿರಬೇಕು. ಇತರ ರಾಜಕೀಯ ಪಕ್ಷಗಳೊಂದಿಗೆ ಕಾಂಗ್ರೆಸ್ ಈ ಚರ್ಚೆಯನ್ನು ಮುಂದಕ್ಕೆ ಕೊಂಡೊಯ್ಯಬೇಕೆಂದು ಕಾಂಗ್ರೆಸ್ ಭಾವಿಸುತ್ತದೆ ಎಂದು ತಿಳಿಸಲಾಗಿದೆ.

Comments

Leave a Reply

Your email address will not be published. Required fields are marked *