ದ್ವೇಷದಿಂದ ಬೇಡ, ಪ್ರೀತಿಯಿಂದ ಗೆಲ್ಲೋಣ: ರಾಹುಲ್ ಮೋದಿ ಆಲಿಂಗನದ ಪೋಸ್ಟರ್ ವೈರಲ್

ಮುಂಬೈ: ದ್ವೇಷದಿಂದ ಬೇಡ, ಪ್ರೀತಿಯಿಂದ ಗೆಲ್ಲೋಣ ಎನ್ನುವ ಸಂದೇಶ ಹೊತ್ತ ಪೋಸ್ಟರ್ ಗಳು ಮುಂಬೈ ನಗರದ ಮೂಲೆ ಮೂಲೆಗಳಲ್ಲಿ ರಾರಾಜಿಸುತ್ತಿವೆ.

ಲೋಕಸಭೆ ಅವಿಶ್ವಾಸ ಗೊತ್ತುವಳಿ ಸಂದರ್ಭದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮ್ಮ ಭಾಷಣದ ಕೊನೆಗೆ ನೀವು ನನ್ನನ್ನು ದ್ವೇಷಿಸಬಹುದು, ಪಪ್ಪು ಅಂತಾನೂ ಕರೆಯಬಹುದು. ಆದ್ರೆ ನಾನೆಂದಿಗೂ ಬಿಜೆಪಿ ಮತ್ತು ಪ್ರಧಾನಿಯನ್ನು ದ್ವೇಷಿಸಿಲ್ಲ ಎಂದು ಹೇಳಿ ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿದ್ದರು. ಇದೇ ವಿಷಯನ್ನು ಅಸ್ತ್ರವಾಗಿ ಮುಂಬೈ ಕಾಂಗ್ರೆಸ್ ನಾಯಕರು ಬಳಸಿಕೊಂಡು ನಗರದಲ್ಲೆಡೆ ಪೋಸ್ಟರ್ ಗಳನ್ನು ಅಂಟಿಸುತ್ತಿದ್ದಾರೆ. ಪೋಸ್ಟರ್ಸ್ ನಲ್ಲಿ ದೊಡ್ಡ ಅಕ್ಷರದಲ್ಲಿ ‘ನಫ್ರತ್ ಸೇ ನಹೀ, ಪ್ಯಾರ್ ಸೇ ಜಿತೆಂಗಿ’ (ದ್ವೇಷದಿಂದ ಬೇಡ, ಪ್ರೀತಿಯಿಂದ ಗೆಲ್ಲೋಣ) ಎನ್ನುವ ಸಾಲುಗಳಿವೆ.

ಪೋಸ್ಟರ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ನೆಟ್ಟಿಗರಿಂದ ಭಾರೀ ಕಮೆಂಟ್ ಹರಿದಾಡುತ್ತಿವೆ. ಮುಂಬೈ ಕಾಂಗ್ರೆಸ್ ತನ್ನ ಟ್ವಿಟ್ಟರ್ ನಲ್ಲಿ ಈ ಫೋಟೋಗಳನ್ನು ಅಪ್ಲೋಡ್ ಮಾಡಿಕೊಂಡಿದ್ದು, ಪರ-ವಿರೋಧದ ಚರ್ಚೆಗಳು ನಡೆದಿವೆ.

Comments

Leave a Reply

Your email address will not be published. Required fields are marked *