UP ಎಲೆಕ್ಷನ್: ಕಾಂಗ್ರೆಸ್ 4ನೇ ಪಟ್ಟಿ ಪ್ರಕಟ 24 ಮಹಿಳೆಯರಿಗೆ ಅವಕಾಶ

ಲಕ್ನೋ: ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಅಭ್ಯರ್ಥಿಗಳ ನಾಲ್ಕನೇ ಪಟ್ಟಿಯನ್ನು ಕಾಂಗ್ರೆಸ್ ಪ್ರಕಟಿಸಿದೆ. 61 ಅಭ್ಯರ್ಥಿಗಳ ಹೆಸರು ಪ್ರಕಟಿಸಲಾಗಿದ್ದು, 24 ಮಹಿಳೆಯರಿಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.

ಕಾಂಗ್ರೆಸ್ ಒಟ್ಟು ಅಭ್ಯರ್ಥಿಗಳ ಪೈಕಿ ಶೇಕಡ 40 ಮಹಿಳಾ ಅಭ್ಯರ್ಥಿಗಳಿಗೆ ಸ್ಪರ್ಧಿಸಲು ಅವಕಾಶ ನೀಡುವುದಾಗಿ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಈ ಹಿಂದೆ ಹೇಳಿದ್ದರು.ಕಾಂಗ್ರೆಸ್ ರಾಯ್ ಬರೇಲಿ, ಅಮೇಠಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕಣಕ್ಕಿಳಿಯಲಿರುವ ಅಭ್ಯರ್ಥಿಗಳ ಹೆಸರು ಪ್ರಕಟ ಮಾಡಿದೆ.

ಮೊದಲ ಪಟ್ಟಿಯಲ್ಲಿ ಪ್ರಕಟಿಸಲಾದ 125 ಅಭ್ಯರ್ಥಿಗಳ ಪೈಕಿ 50 ಮಹಿಳಾ ಅಭ್ಯರ್ಥಿಗಳಿದ್ದರು.  ಎರಡನೇ ಪಟ್ಟಿಯಲ್ಲಿನ 41 ಅಭ್ಯರ್ಥಿಗಳಲ್ಲಿ 16 ಜನ ಮಹಿಳೆಯರು ಹಾಗೂ 89 ಅಭ್ಯರ್ಥಿಗಳ ಮೂರನೇ ಪಟ್ಟಿಯಲ್ಲಿ 37 ಮಹಿಳಾ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದೆ. ಮೊದಲ ಪಟ್ಟಿಯಲ್ಲಿ 2017ರ ಉನ್ನಾವೊ ಸಂತ್ರಸ್ತೆಯ ತಾಯಿ ಆಶಾ ದೇವಿ ಅವರಿಗೆ ಟಿಕೆಟ್ ನೀಡಲಾಗಿದೆ. ಇದನ್ನೂ ಓದಿ: ನನ್ನ ಹೆಸರು ಸಲ್ಮಾನ್ ಖಾನ್’ ಎಂದು ಹಾಲಿವುಡ್ ನಟನಿಗೆ ಪರಿಚಯ ಮಾಡಿಕೊಂಡ ಸಲ್ಲು

ಆಶಾ ಕಾರ್ಯಕರ್ತರ ಗೌರವಧನ ಹೆಚ್ಚಿಸಲು ನಡೆದ ಹೋರಾಟದ ನೇತೃತ್ವ ವಹಿಸಿದ್ದ ಪೂನಂ ಪಾಂಡೆ ಅವರಿಗೆ ಷಹಜಹಾನ್‍ಪುರದಿಂದ ಟಿಕೆಟ್ ಘೋಷಿಸಲಾಗಿದೆ. ಸಂಘ ಸಂಸ್ಥೆಗಳಿಂದ ಹಿಡಿದು ಪತ್ರಕರ್ತರ ವರೆಗೂ, ಹೋರಾಟ ನಡೆಸುತ್ತಿರುವ ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ ಪ್ರಿಯಾಂಕಾ ಹೇಳಿದ್ದಾರೆ. ಇದನ್ನೂ ಓದಿ:  ಎಲಾನ್ ಮಸ್ಕ್ ಅವರ ಬಿಗ್ ಆಫರ್ ತಿರಸ್ಕರಿಸಿದ ಯುವಕ

ಉತ್ತರ ಪ್ರದೇಶದಲ್ಲಿ ಫೆಬ್ರುವರಿ 10ರಿಂದ ಮಾರ್ಚ್ 7ರ ವರೆಗೆ ಒಟ್ಟು ಏಳು ಹಂತಗಳಲ್ಲಿ ಮತದಾನ ನಡೆಯಲಿದೆ. ಮಾರ್ಚ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

 

Comments

Leave a Reply

Your email address will not be published. Required fields are marked *