ಕಮಲ ಮುಡಿವಂತಿಲ್ಲ, ವಾಪಸ್ಸಾಗುವಂತೆಯೂ ಇಲ್ಲ- ರೆಬೆಲ್ ಶಾಸಕರಿಗೆ ಟ್ರಬಲ್ ಶುರು

ಬೆಂಗಳೂರು: ಅಧಿಕಾರದ ಆಸೆಯಿಂದ ಕಮಲ ಮುಡಿಯಲು ಹೊರಟವರಿಗೆ ಈಗ ಹೊಸದೊಂದು ಸಮಸ್ಯೆ ಎದುರಾಗಿದೆ. ಅತ್ತ ಕಮಲ ಮುಡಿಯುವಂತಿಲ್ಲ, ಇತ್ತ ಕೈ ಹಿಡಿದು ನಡೆಯುವಂತಿಲ್ಲ ಎಂಬಂತಹ ಸಂಕಷ್ಟಕ್ಕೆ ರೆಬೆಲ್ ಶಾಸಕರುಗಳು ಸಿಲುಕಿದ್ದಾರೆ.

ರಾಜೀನಾಮೆ ಕೊಟ್ರೆ ಚುನಾವಣೆ ಎದುರಿಸಬೇಕು. ಆದರೆ ಆಪರೇಷನ್ ಸಕ್ಸಸ್ ಆಗದಿದ್ದರೆ ರಾಜೀನಾಮೆ ಕೊಟ್ಟರೂ ಪ್ರಯೋಜನ ಇಲ್ಲ. ರಾಜೀನಾಮೆ ಕೊಡದಿದ್ದರೆ ಕಾಂಗ್ರೆಸ್ ನಿಂದ ಅನರ್ಹತೆ ಶಿಕ್ಷೆಗೆ ಗುರಿಯಾಗಿ ಅವಮಾನವಾಗೋದು ಗ್ಯಾರಂಟಿಯಾಗಿದೆ. ಹೀಗಾಗಿ ರೆಬೆಲ್ ಶಾಸಕರಿಗೆ ಎಲ್ಲಿ ಹೋದ್ರು ಒಂದೊಂದು ರೀತಿಯ ಸಂಕಷ್ಟ ತಪ್ಪಿದ್ದಲ್ಲ ಎನ್ನುವಂತಾಗಿದೆ. ಇದನ್ನೂ ಓದಿ: ಸೋಮವಾರದೊಳಗೆ ಜಾಧವ್ ರಾಜೀನಾಮೆ ಪಕ್ಕಾ – ಮಾಜಿ ಸಚಿವ ಬಾಬೂರಾವ್ ಚಿಂಚನಸೂರು

ಬಿಜೆಪಿ ನಾಯಕರ ಭರವಸೆ ನಂಬಿ ಆಪರೇಷನ್ ಆಗೇ ಆಗುತ್ತದೆ. ಸರ್ಕಾರ ಬಂದು ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ ಎಂದು ಬಂಡಾಯ ಶಾಸಕರು ಬಿಜೆಪಿಯತ್ತ ವಾಲಿದ್ದರು. ಆದರೆ ಈಗ ನಿರೀಕ್ಷೆಯ ಶಾಸಕರ ಸಂಖ್ಯೆ ಸಿಗದೆ ಆಪರೇಷನ್ ಅಂತೂ ಆಗಿಲ್ಲ. ಬಿಜೆಪಿ ಸರ್ಕಾರವೂ ಬಂದಿಲ್ಲ. ಇನ್ನೊಂದು ಕಡೆ, ಆಗಿದ್ದು ಆಯ್ತು ವಾಪಾಸ್ ಬರ್ತೀವಿ ಅನ್ನೋಣ ಅಂದರೆ ಎಲ್ಲಾ ರೀತಿಯಲ್ಲೂ ಅವಮಾನ ಕಟ್ಟಿಟ್ಟ ಬುತ್ತಿಯಾಗಿದೆ. ಹೀಗಾಗಿ ಕೈ ಪಾಳಯದ ಬಂಡಾಯ ಶಾಸಕರು ಅತ್ತ ಅಲ್ಲೇ ಇರುವಂತಿಲ್ಲ. ಇತ್ತ ಇಲ್ಲಿಗೆ ವಾಪಾಸ್ ಬರುವಂತಿಲ್ಲ ಎಂಬ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬುದಾಗಿ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಅತೃಪ್ತ ಶಾಸಕರು ಪಕ್ಷ ಬಿಡುತ್ತಾರೆ ಅನಿಸ್ತಿದೆ: ಜಿ.ಪರಮೇಶ್ವರ್

ಇದನ್ನೂ ಓದಿ: ಕೈ ಅತೃಪ್ತರ ಅನರ್ಹತೆ ಯಾವಾಗ? ಕಾಂಗ್ರೆಸ್ ನಡೆ ಏನು?

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *