ಪಣಜಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಗೋವಾದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
Smt. @priyankagandhi joins the tribal women of Morpirla village during a phenomenal performance of their folk dance.#PriyankaGandhiWithGoa pic.twitter.com/p0ae6mKM9x
— Congress (@INCIndia) December 10, 2021
ಮುಂಬರುವ ವಿಧಾನಸಭಾ ಚುನಾವಣೆಯ ಪ್ರಚಾರಕ್ಕಾಗಿ ನಿನ್ನೆ ಗೋವಾಕ್ಕೆ ಬಂದಿದ್ದ ಪ್ರಿಯಾಂಕಾ ಗಾಂಧಿ ವಾದ್ರಾ, ಚುನಾವಣಾ ಕಣದಲ್ಲಿರುವ ಮೋರ್ಪಿರ್ಲಾ ಗ್ರಾಮದಲ್ಲಿ ಬುಡಕಟ್ಟು ಮಹಿಳೆಯರೊಂದಿಗೆ ಹೆಜ್ಜೆ ಹಾಕುತ್ತಾ ಜಾನಪದ ನೃತ್ಯ ಮಾಡಿದ್ದಾರೆ.
#WATCH Priyanka Gandhi Vadra performs traditional dance with the tribal women at Morpirla village in South Goa pic.twitter.com/qpf7hNaHd4
— ANI (@ANI) December 10, 2021
ವೀಡಿಯೋದಲ್ಲಿ ಏನಿದೆ?: ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ 43 ಸೆಕೆಂಡುಗಳ ವೀಡಿಯೋ ಕ್ಲಿಪ್‍ನಲ್ಲಿ, ಪ್ರಿಯಾಂಕಾ ಗಾಂಧಿ ವಾದ್ರಾ ಕೆಂಪು ಸೀರೆಯನ್ನು ಧರಿಸಿ ಬುಡಕಟ್ಟು ಜನಾಂಗದವರ ಹಾಡಿಗೆ ತಕ್ಕತೆ ಹೆಜ್ಜೆ ಹಾಕುತ್ತಿರುವುದನ್ನು ಕಾಣಬಹುದಾಗಿದೆ. ಬುಡಕಟ್ಟು ಮಹಿಳೆಯರು ಜೊತೆ ಜೊತೆಯಾಗಿ ಪ್ರಿಯಾಂಕಾ ಗಾಂಧಿ ಸಂತೋಷದಿಂದ ಹೆಜ್ಜೆ ಹಾಕುತ್ತಿದ್ದಾರೆ.

Leave a Reply