ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.

ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ಜಿಲ್ಲೆಯ ಗೌರಿಬಿದನೂರು ಪಟ್ಟಣಕ್ಕೆ ಬಂದಿದ್ದರು. ನಗರದ ಗಾಂಧಿ ವೃತ್ತದಲ್ಲಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ ಧ್ವನಿವರ್ಧಕದ ಕರ್ಕಶ ಶಬ್ದಕ್ಕೆ ಅರೆಕ್ಷಣ ಬೆಚ್ಚಿಬಿದ್ದಾರೆ.

ರಾಹುಲ್ ಗಾಂಧಿ ಭಾಷಣ ಆರಂಭಿಸುವಾಗ ಮೈಕ್ ಕೈಕೊಟ್ಟಿದೆ. ನಂತರ ಧ್ವನಿವರ್ಧಕದಿಂದ ದಿಢೀರ್ ಬಂದ ಕರ್ಕಶ ಶಬ್ದದಿಂದ ಅವರು ಅರೆಕ್ಷಣ ಬೆಚ್ಚಿದ್ದಾರೆ. ಕರ್ಕಶ ಧ್ವನಿ ನಿಂತ ನಂತರ ರಾಹುಲ್ ಗಾಂಧಿ ನಗುಮುಖದಿಂದ ನಮಸ್ಕಾರ ಎಂದು ಭಾಷಣ ಆರಂಭಿಸಿದ್ದಾರೆ.

ರಾಹುಲ್ ಗಾಂಧಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮೊಯಿಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬಸವಣ್ಣನವರ ವಚನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳಿದರು.

Comments

Leave a Reply

Your email address will not be published. Required fields are marked *