ಕಾಂಗ್ರೆಸ್ ಪಾದಯಾತ್ರೆ- ಇಂದು, ನಾಳೆ ಬೆಂಗಳೂರು ಲಾಕ್ ಪಕ್ಕಾ

ಬೆಂಗಳೂರು: ಕಾಂಗ್ರೆಸ್ ಪಾದಯಾತ್ರೆಯ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ಸಿಲಿಕಾನ್ ಸಿಟಿ ಸ್ತಬ್ಧವಾಗುವ ಸಾಧ್ಯತೆಗಳಿವೆ. ಇಂದು ಬೆಂಗಳೂರು ಸುತ್ತಮುತ್ತ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ.

ಇಂದು ಜ್ಞಾನಭಾರತಿ ಮೆಟ್ರೋ ಸ್ಟೇಷನ್‍ನಿಂದ ಪಾದಯಾತ್ರೆ ಆರಂಭವಾಗಲಿದೆ. 3ನೇ ದಿನದ ಪಾದಯಾತ್ರೆ ಬೆಂಗಳೂರಿನಲ್ಲಿ ಸಂಚಾರ ಮಾಡಲಿದೆ. ಕೈನಾಯಕರ ಪಾದಯಾತ್ರೆ ನೂರಾರು ಮಂದಿಯೊಂದಿಗೆ ಸಾಗಲಿದೆ. ಹೀಗಾಗಿ ಇಂದು ಹಾಗೂ ನಾಳೆ ಹುಷಾರಾಗಿರಿ. ಬೆಂಗಳೂರಿನಲ್ಲಿ ಸಂಚಾರ ಅಸ್ತವ್ಯಸ್ತವಾಗುವುದು ಪಕ್ಕಾ.

ಇಂದು ಬೆಂಗಳೂರು ಸುತ್ತಮುತ್ತ ಟ್ರಾಫಿಕ್ ಜಾಮ್ ಸಾಧ್ಯತೆ ಇದೆ. ಮೈಸೂರು ರೋಡಲ್ಲೂ ಜಾಮ್, ತುಮಕೂರು ರೋಡಲ್ಲೂ ಜಾಮ್. ಇಂದು ಈ ರಸ್ತೆಯಲ್ಲಿ ಓಡಾಡೋರು ಬದಲಿ ರೋಡ್ ನೋಡಿಕೊಳ್ಳಿ. ಜ್ಞಾನಭಾರತಿ ಮೆಟ್ರೋ ಸ್ಟೇಷನ್‍ನಿಂದ ಜಯದೇವ ಆಸ್ಪತ್ರೆವರೆಗೆ ಪಾದಯಾತ್ರೆ ಸಾಗಲಿದೆ.

ಇಂದು ಎಲ್ಲೆಲ್ಲಿ ಪಾದಯಾತ್ರೆ..?
ಜ್ಞಾನಭಾರತಿ ಮೆಟ್ರೋ ಸ್ಟೇಷನ್, ನಾಯಂಡಹಳ್ಳಿ, ನಾಯಂಡಹಳ್ಳಿ ಜಂಕ್ಷನ್, ಪೆಸೆಟ್ ಕಾಲೇಜ್ ಜಂಕ್ಷನ್, ಕತ್ರಿಗುಪ್ಪೆ ಮುಖ್ಯರಸ್ತೆ ಜಂಕ್ಷನ್, ವೆಂಕಟಾದ್ರಿ ಕಲ್ಯಾಣ ಮಂಟಪ, ಕದಿರೇನಹಳ್ಳಿ ಜಂಕ್ಷನ್, ಬನಶಂಕರಿ ದೇವಾಲಯ, ಜಯದೇವ ಆಸ್ಪತೆ, ಅದ್ವೈತ್ ಪೆಟ್ರೋಲ್ ಬಂಕ್ ನಲ್ಲಿ ಪಾದಯಾತ್ರೆ ಸಾಗಲಿದೆ. ಇದನ್ನೂ ಓದಿ: ಮಹಾಶಿವರಾತ್ರಿ ಹಬ್ಬದ ದಿನ ಉಪವಾಸ ಏಕೆ ಮಾಡ್ತಾರೆ?

ಜ್ಞಾನಭಾರತಿ ಮೆಟ್ರೋ- ಬಿಟಿಎಂ 1ನೇ ಹಂತ, ಕೆಂಚೇನಹಳ್ಳಿ ಕ್ರಾಸ್ ಜೈರಾಂದಾಸ್ ರೈಲ್ವೆ ಗೇಟ್, ಜಂಕ್ಷನ್- ಜ್ಞಾನಭಾರತಿ ಜಂಕ್ಷನ್, ಆರ್.ಆರ್.ಆರ್ಚ್ ಜಂಕ್ಷನ್-ಪಂತರಪಾಳ್ಯ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್- ದೇವೇಗೌಡ ವೃತ್ತ, ಪಿ.ಇ.ಎಸ್ ಕಾಲೇಜ್ ಜಂಕ್ಷನ್-ಕೆಇಬಿ ಜಂಕ್ಷನ್ ಎನ್‍ಸಿಆರ್‍ಟಿ, ಜಂಕ್ಷನ್- ಇಟ್ಟಮಡುವು ಜಂಕ್ಷನ್- ಕತ್ರಿಗುಪ್ಪೆ ಜಂಕ್ಷನ್, ಕಾಮಾಕ್ಯ ಜಂಕ್ಷನ್- ವಿದ್ಯಾಪೀಠ ಪಾರ್ಕ್, ವೆಂಕಟಾದ್ರಿ ಕಲ್ಯಾಣ ಮಂಟಪ- ರಿಂಗ್ ರಸ್ತೆ, ಚನ್ನಮ್ಮ ಜಂಕ್ಷನ್- ಸಂಗಂ ಸರ್ಕಲ್, ರಾಜಲಕ್ಷ್ಮಿ ಜಂಕ್ಷನ್-ಅರಬಿಂದೋ ಜಂಕ್ಷನ್- 46ನೇ ಅಡ್ಡ, ರಸ್ತೆ 2ನೇ ಮುಖ್ಯ ರಸ್ತೆ- ಜಯನಗರ 5ನೇ ಬ್ಲಾಕ್, ರಾಗಿಗುಡ್ಡ ಜಂಕ್ಷನ್- ಜಯನಗರ- ಈಸ್ಟ್ ಎಂಡ್ ಜಂಕ್ಷನ್, ಜಯದೇವ ಜಂಕ್ಷನ್ – ಬಿಟಿಎಂ 20ನೇ ಮೈನ್‍ವರೆಗೆ ಕಾಂಗ್ರೆಸ್ ಪಾದಯಾತ್ರೆ ನಡೆಯಲಿದೆ.

Comments

Leave a Reply

Your email address will not be published. Required fields are marked *