ಕಲಾಪದ ವೇಳೆ ನುಗ್ಗಿದ ಯುವಕನನ್ನು ಹಿಡಿದು ಥಳಿಸಿದ ಸಂಸದರು

ನವದೆಹಲಿ: ಲೋಕಸಭಾ (Loksabha) ಕಲಾಪದ ವೇಳೆ ಗ್ಯಾಲರಿಯಿಂದ ಹಾರಿ ಸ್ಮೋಕ್ ಬಾಂಬ್ (Smoke Bomb) ಸಿಡಿಸಿದ ಯುವಕರಲ್ಲಿ ಓರ್ವನನ್ನು ಹಿಡಿದ ಸಂಸದರು ಗೂಸಾ ನೀಡಿದ್ದಾರೆ.

ಯುವಕ ಸಾಗರ್ ಶರ್ಮಾ ಗ್ಯಾಲರಿಯಿಂದ ಹಾರಿ ಸಂಸತ್‍ನಲ್ಲಿ ಓಡಾಡುತ್ತಿದ್ದಾಗಲೇ ಸಂಸದರೆಲ್ಲ ಆತನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ. ಸಾಗರ್ ಶರ್ಮಾ ಕೈಗೆ ಸಿಗುತ್ತಿದ್ದಂತೆಯೇ ಸಂಸದರೆಲ್ಲ ಗುಂಪು ಗುಂಪಾಗಿ ಆರೋಪಿಗೆ ಗೂಸಾ ಕೊಟ್ಟಿದ್ದಾರೆ.

ಸಂಸತ್ ಮೇಲೆ ದಾಳಿ ನಡೆದು 22 ವರ್ಷವಾದ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಹುತಾತ್ಮ ಭದ್ರತಾ ಸಿಬ್ಬಂದಿಗೆ ಗೌರವ ಸಲ್ಲಿಸಲಾಗಿತ್ತು. ಇದಾದ ಬಳಿಕ ಕಲಾಪ ನಡೆಯುತ್ತಿದ್ದ ಸಂದರ್ಭದಲ್ಲಿ ಇಬ್ಬರು ವ್ಯಕ್ತಿಗಳು ಲೋಕಸಭೆ ಗ್ಯಾಲರಿಯಿಂದ ಜಿಗಿದು ಕಲರ್ ಬಾಂಬ್ ಸಿಡಿಸಿದ್ದಾರೆ. ಇತ್ತ ಇಬ್ಬರು ಹೊರಗಡೆ ಪ್ರತಿಭಟನೆ ನಡೆಸಿದ್ದಾರೆ. ಪ್ರಕರಣ ಸಂಬಂಧ ಒಟ್ಟು ನಾಲ್ವರನ್ನು ವಶಕ್ಕೆ ಪಡೆದ ಭದ್ರತಾ ಸಿಬ್ಬಂದಿ ವಿಚಾರಣೆ ನಡೆಸುತ್ತಿದ್ದಾರೆ.

https://twitter.com/Politics_2022_/status/1734883598476673452

ಕಲಾಪದ ವೇಳೆ ನುಗ್ಗಿರುವವರನ್ನು ಮೈಸೂರು ಮೂಲದ ಮನೋರಂಜನ್ ಹಾಗೂ ಸಾಗರ್ ಶರ್ಮಾ ಎಂದು ಗುರುತಿಸಲಾಗಿದೆ. ಈ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಂಸತ್‌ನಲ್ಲಿ ಸ್ಮೋಕ್‌ ಬಾಂಬ್‌ – ವೀಕ್ಷಕರಿಗೆ ಇನ್ಮುಂದೆ ಪಾಸ್‌ ಸಿಗಲ್ಲ