ಅದೃಷ್ಟ ಅನ್ನೋದು ರೇಪ್‍ನಂತೆ, ಬಂದಾಗ ಆನಂದಿಸಲು ಪ್ರಯತ್ನಿಸಿ: ಸಂಸದನ ಪತ್ನಿ

ತಿರುವನಂತಪುರ: ಕೇರಳದ ಕಾಂಗ್ರೆಸ್ ಸಂಸದ ಹಿಬಿ ಇಡನ್ ಪತ್ನಿ ಅನ್ನಾ ಲಿಂಡಾ ಹೇಳಿಕೆ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಫೇಸ್‍ಬುಕ್ ಪೋಸ್ಟ್: ಅದೃಷ್ಟ ಅನ್ನೋದಿ ರೇಪ್ ತರಹ. ಈ ಅದೃಷ್ಟವನ್ನ ವಿರೋಧಿಸಲು ಸಾಧ್ಯವಾಗದಿದ್ದರೆ, ಆನಂದಿಸಲು ಪ್ರಯತ್ನಿಸಬೇಕು ಎಂಬ ಸಾಲುಗಳನ್ನು ಬರೆದುಕೊಂಡಡು ಪ್ರವಾಹ ಪರಿಸ್ಥಿತಿ ಮತ್ತು ಐಸ್ ಕ್ರೀಂ ತಿನ್ನುವ ಫೋಟೋ ಪೋಸ್ಟ್ ಮಾಡಿದ್ದರು. ಪೋಸ್ಟ್ ಗೆ ಆಕ್ರೋಶ ವ್ಯಕ್ತವಾದ ಕೂಡಲೇ ಡಿಲೀಟ್ ಮಾಡಿದ್ದಾರೆ.

ಸದಾ ಸಾಮಾಜಿಕ ಜಾಲತಾಣಗಳಲ್ಲಿ ಆ್ಯಕ್ಟೀವ್ ಆಗಿರುವ ಲಿಂಡಾ ಸದಾ ಪೋಸ್ಟ್ ಮಾಡುತ್ತಿರುತ್ತಾರೆ. ಹಿಬಿ ಇಡನ್ ಪತ್ನಿ ಲಿಂಡಾ ಇಡನ್ ಫೇಸ್‍ಬುಕ್ ಪೋಸ್ಟ್ ಸದ್ಯ ಚರ್ಚೆಗೆ ಕಾರಣವಾಗಿದೆ. ಲಿಂಡಾರ ಪೋಸ್ಟಿಗೆ ಆಕ್ರೋಶ ವ್ಯಕ್ತವಾಗಿದ್ದು, ಕ್ಷಮೆ ಕೇಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಲೋಕಸಭಾ ಚುನಾವಣೆ ವೇಳೆ ಹಿಬಿ ಇಡನ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿದ್ದಾರೆ. ಹಿಬಿ ಇಡನ್ ಅವರ ಎರ್ನಾಕುಲಂ ಕ್ಷೇತ್ರ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಪೋಸ್ಟ್ ಡಿಲೀಟ್ ಮಾಡಿದ ಬಳಿಕ ಲಿಂಡಾ ಇದೂವರೆಗೂ ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

Comments

Leave a Reply

Your email address will not be published. Required fields are marked *