ಉಡುಪಿ: ರಾಜ್ಯ ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಇಂದು ಹೊರಬಿದ್ದಿದ್ದು, ಉಡುಪಿಯಲ್ಲಿ ವಿಜಯದ ಪತಾಕೆ ಹಾರಿಸಿದ್ದ ಕಾಂಗ್ರೆಸ್ ಮಹಿಳಾ ಅಭ್ಯರ್ಥಿ ಕಿವಿ ಮುಚ್ಚಿಕೊಂಡು ಓಡಿದ ಘಟನೆ ನಡೆದಿದೆ.
ಉಡುಪಿ ನಗರಸಭೆಗೆ ಆಯ್ಕೆಯಾದ ಕಾಂಗ್ರೆಸ್ ನ ಸೆಲಿನಾ ಕರ್ಕಡ ಅವರು ಗೆಲುವನ್ನು ಘೋಷಿಸುತ್ತಿದ್ದಂತೆಯೇ ಮತ ಎಣಿಕಾ ಕೇಂದ್ರದಲ್ಲಿ ಮೋದಿಗೆ ಜೈಕಾರ ಹಾಕಲಾಯಿತು. ಬಿಜೆಪಿ ಕಾರ್ಯಕರ್ತರ ಮೋದಿ ಮೋದಿ ಕೂಗಿನ ಮಧ್ಯೆಯೇ ಸಾಗುತ್ತಿದ್ದ ಸದಸ್ಯೆಗೆ ಇರಿಸುಮುರಿಸು ಉಂಟಾಗಿದ್ದು, ಹೀಗಾಗಿ ಕಿವಿ ಮುಚ್ಚಿಕೊಂಡು ಅಲ್ಲಿಂದ ಓಟಕ್ಕಿತ್ತರು. ಇದನ್ನೂ ಓದಿ: ಉಡುಪಿಯಲ್ಲಿ ಬಿಜೆಪಿ ಕ್ಲೀನ್ ಸ್ವೀಪ್- ಮಧ್ವರಾಜ್ ವಾರ್ಡ್ ನಲ್ಲೇ ಕಾಂಗ್ರೆಸ್ಸಿಗೆ ಸೋಲು

ಉಡುಪಿಯ ಮೂಡುಪೆರಂಪಳ್ಳಿ ವಾರ್ಡ್ ನ ಕಾಂಗ್ರೆಸ್ ಸದಸ್ಯೆ ಸೆಲಿನಾ ಗೆಲುವಿನ ಬಳಿಕ ಅವರನ್ನು ಅಭಿನಂದಿಸಲು ಕಾರ್ಯಕರ್ತರ ಕೊರತೆಯಾಗಿದ್ದು, ಈ ಹಿನ್ನೆಲೆಯಲ್ಲಿ ಸೆಲಿನಾ ಅವರೇ ಹಾರ ಹಾಕಿಕೊಂಡು ಏಕಾಂಗಿಯಾಗಿ ತೆರಳಿದ್ದಾರೆ. ಇದನ್ನೂ ಓದಿ: ಶಾಸಕರ ಮುಂದೆ ಕಣ್ಣೀರು ಹಾಕಿದ ಜೆಡಿಎಸ್ ಕಾರ್ಯಕರ್ತ!
ಒಟ್ಟಿನಲ್ಲಿ ಇಂದು ಕುತೂಹಲದಿಂದ ಕಾಯುತ್ತಿದ್ದ ಸ್ಥಳೀಯ ಸಂಸ್ಥೆಗಳು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು ವಿಧಾನಸಭಾ ಚುನಾವಣೆಯ ಫಲಿತಾಂಶದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಧೂಳಿಪಟವಾಗಿದೆ. ವಿಶೇಷ ಏನೆಂದರೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಅವರ ವಾರ್ಡ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದಾರೆ.

ಮೈಸೂರು, ತುಮಕೂರು ಮತ್ತು ಶಿವಮೊಗ್ಗ ಮಹಾನಗರ ಪಾಲಿಕೆ ಸೇರಿದಂತೆ 22 ಜಿಲ್ಲೆಗಳ 29 ನಗರಸಭೆ, 53 ಪುರಸಭೆ, 20 ಪಟ್ಟಣ ಪಂಚಾಯಿತಿಗಳಿಗೆ ಚುನಾವಣೆ ನಡೆದಿತ್ತು. ಶೇಕಡಾ 67.51ರಷ್ಟು ಮತದಾನವಾಗಿತ್ತು. ಒಟ್ಟು 2634 ವಾರ್ಡ್ ಗಳಲ್ಲಿ ಚುನಾವಣೆ ನಡೆದಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply