ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಸುದ್ದಿಗೋಷ್ಠಿ ನಡೆಸಿದ ಅಮಿತ್ ಶಾ

ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಕರ್ನಾಟಕ ಚುನಾವಣೆ ಫಲಿತಾಂಶದ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿಯನ್ನು ಇಂದು ನಡೆಸಿದ್ದಾರೆ.

ಚುನಾವಣೆ ಫಲಿತಾಂಶದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಮೇ 17ರಂದು ಬಿ.ಎಸ್.ಯಡಿಯೂರಪ್ಪ ರಾಜ್ಯಪಾಲರ ಅನುಮತಿ ಪಡೆದುಕೊಂಡು ಪ್ರಮಾಣ ವಚನ ಸ್ವೀಕರಿಸಿದ್ರು. ರಾಜ್ಯಪಾಲ ವಜೂಭಾಯಿ ವಾಲಾ ಬಹುಮತ ಸಾಬೀತಿಗೆ 15 ದಿನದ ಕಾಲಾವಕಾಶ ನೀಡಿದ್ದರು. ಆದ್ರೆ ಸುಪ್ರೀಂ ಕೋರ್ಟ್ ಅದೇಶದನ್ವಯ ಪ್ರಮಾಣ ವಚನದ ಮರುದಿನವೇ ಬಹುಮತ ಸಾಬೀತು ಮಾಡಬೇಕಾಗಿ ಬಂತು. ಸಹಜವಾಗಿ ನಮ್ಮ ಬಳಿ ಬಹುಮತವಿರದ ಕಾರಣ ಯಡಿಯೂರಪ್ಪ ರಾಜೀನಾಮೆ ನೀಡಬೇಕಾದ ಪರಿಸ್ಥಿತಿ ಎದುರಾಯಿತು ಅಂತಾ ಹೇಳಿದ್ರು.

ಜನಾರ್ದನ ರೆಡ್ಡಿ, ಶ್ರೀ ರಾಮುಲು, ವಿಜಯೇಂದ್ರ ಮೂಲಕ ಕೋಟಿ-ಕೋಟಿ ರೂಪಾಯಿ ಆಮಿಷವೊಡ್ಡಿ ಬಿಜೆಪಿ ಕಾಂಗ್ರೆಸ್ಸಿನ ಕೆಲ ಶಾಸಕರನ್ನು ಸೆಳೆಯಲು ಯತ್ನಿಸಿತ್ತು ಅನ್ನೋ ಆರೋಪ ಕೇಳಿಬಂದಿತ್ತು. ಈ ಎಲ್ಲ ಆರೋಪಗಳು ಸುಳ್ಳಾಗಿದ್ದು, ಕಾಂಗ್ರೆಸ್ ನಾವು ಕುದುರೆ ವ್ಯಾಪರಕ್ಕೆ ಮಾಡುತ್ತಿದ್ದೇವೆ ಅಂತಾ ಆರೋಪಿಸಿದೆ. ಆದ್ರೆ ಕಾಂಗ್ರೆಸ್ ನಿಜವಾಗಿಯೂ ಕುದುರೆಗಳು ನಿಲ್ಲುವ ಸ್ಥಳವನ್ನೇ ನುಂಗಿ ಹಾಕಿದೆ ಅಂತಾ ವ್ಯಂಗ್ಯವಾಡಿದ್ರು.

ಬಹುಮತ ಸಾಬೀತು ಮಾಡುವ ದಿನದಂದು ಕಾಂಗ್ರೆಸ್ ಕೆಲ ನಕಲಿ ಆಡಿಯೋ ಕ್ಲಿಪ್‍ಗಳನ್ನು ಬಿಡುಗಡೆ ಮಾಡಿತು. ಆಡಿಯೋ ಕ್ಲಿಪ್‍ಗಳಲ್ಲಿ ಬಿಜೆಪಿ ನಾಯಕರು ಕಾಂಗ್ರೆಸ್ಸಿನ ಕೆಲ ಶಾಸಕರಿಗೆ ಆಮಿಷ ನೀಡಿದೆ ಅಂತಾ ಆರೋಪಿಸಿದೆ. ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಶಿವರಾಮ್ ಹೆಬ್ಬಾರ್ ಪಕ್ಷ ಬಿಡುಗಡೆ ಮಾಡಿರುವ ಒಂದು ಆಡಿಯೋದಲ್ಲಿ ಕೇಳುವ ಧ್ವನಿ ನನ್ನ ಪತ್ನಿಯದಲ್ಲ. ಅದು ಫೇಕ್ ಆಡಿಯೋ ಎಂದು ಫೇಸ್‍ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ಆರೋಪಗಳಿಗೆ ತಿರುಗೇಟು ನೀಡಿದ್ರು.

ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ 104 ಕ್ಷೇತ್ರಗಳಲ್ಲಿ ಅಭೂತಪೂರ್ವ ಗೆಲುವನ್ನು ಪಡೆದುಕೊಂಡಿದೆ. 104 ಸೀಟ್‍ಗಳೇನು ಕಡಿಮೆ ಸಂಖ್ಯೆಯೇನಲ್ಲ. ಮ್ಯಾಜಿಕ್ ನಂಬರ್‍ಗೆ ಕೇವಲ 7 ಸ್ಥಾನಗಳು ಮಾತ್ರ ಕಡಿಮೆ ಹೊಂದಿದ್ದೇವೆ. ಮುಂದಿನ ದಿನಗಳಲ್ಲಿ ನಡೆಯುವ ಆರ್.ಆರ್.ನಗರ ಮತ್ತು ಜಯನಗರ ಚುನಾವಣೆಗಳು ನಡೆಯಲಿವೆ. ಇನ್ನು ಕಾಂಗ್ರೆಸ್-ಜೆಡಿಎಸ್ ನಾವು ಕುದುರೆ ವ್ಯಾಪಾರ ಮಾಡುಲು ಮುಂದಾಗಿದ್ದೇವೆ ಅಂತಾ ಆರೋಪಿಸುತ್ತಿತ್ತು. ಆದ್ರೆ ತಾವೇ ಗೆದ್ದ ಎಲ್ಲ ಅಭ್ಯರ್ಥಿಗಳನ್ನು ರೆಸಾರ್ಟ್ ನಲ್ಲಿ ಇರಿಸಿತ್ತು ಎಂದು ಲೇವಡಿ ಮಾಡಿದ್ರು.

Comments

Leave a Reply

Your email address will not be published. Required fields are marked *