ಹೊಸ ಪಿಡಿಓ ನಮಗೆ ಬೇಡ- ದಾಸನಪುರ ಪಿಡಿಓಗೆ ಕೈ ನಾಯಕರು ಧಮ್ಕಿ

ಬೆಂಗಳೂರು: ನಗರದ ಹೊರವಲಯದ ನೆಲಮಂಗಲ ಸಮೀಪದ ದಾಸನಪುರ ಪಂಚಾಯ್ತಿಗೆ ನೂತನ ಪಿಡಿಓ ಆಗಿ ಅಜಯ್ ನೇಮಕವಾಗಿದ್ದಾರೆ.

ಆದ್ರೆ, ಇವರ ಮೇಲೆ ಹಿಂದಿನ ಪಂಚಾಯ್ತಿಯಲ್ಲಿ ಆರೋಪಗಳಿವೆ. ಇವರು ನಮಗೆ ಬೇಡ ಅಂತ ಸಂಸದ ವೀರಪ್ಪ ಮೊಯ್ಲಿ ಬಲಗೈ ಬಂಟ ಹಾಗೂ ನೆಲಮಂಗಲದ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಕಾಶ್ ಎಂಬವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಅದಾಗ್ಯೂ ಡ್ಯೂಟಿ ರಿಪೋರ್ಟ್‍ಗೆ ಯತ್ನಿಸಿದ ಅಜಯ್‍ಗೆ ಊರಿನ ಗ್ರಾಮಸ್ಥರನ್ನ ಎದುರು ಹಾಕಿಕೊಂಡು ಹೇಗೆ ಕೆಲಸ ಮಾಡ್ತೀಯ ನೋಡ್ಕೋತೀನಿ ಅಂತ ಧಮ್ಕಿ ಹಾಕಿದ್ದಾರೆ. ಆದ್ರೆ, ಪಂಚಾಯಿತಿ ಕೆಲ ಸದಸ್ಯರು ಬೆಂಬಲಕ್ಕೆ ನಿಂತರೂ ಪ್ರಕಾಶ್ ಆವಾಜ್‍ಗೆ ಹೆದರಿ ಪಿಡಿಓ ಅಜಯ್ ಕಚೇರಿಯಿಂದ ಹೊರ ನಡೆದಿದ್ದಾರೆ ಎಂದು ತಿಳಿದುಬಂದಿದೆ.

Comments

Leave a Reply

Your email address will not be published. Required fields are marked *