ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ: ಕಾಂಗ್ರೆಸ್ ಮುಖಂಡ ರಾಜೇಶ್

ಮಂಡ್ಯ: ಮಂಡ್ಯ ಲೋಕಸಭೆ ಉಪಚುನಾವಣೆ ಘೋಷಣೆಯಾದ ನಂತರ ಮಂಡ್ಯದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ನಾಯಕರ ನಡುವೆ ಮಾತಿನ ಸಮರ ತಾರಕಕ್ಕೇರಿದ್ದು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ ಎಂದು ನಾಗಮಂಗಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜೇಶ್ ವಾಗ್ದಾಳಿ ನಡೆಸಿದ್ದಾರೆ.

ಶಾಸಕ ಸುರೇಶ್‍ಗೌಡ, ಮಾಜಿ ಶಾಸಕ ಚೆಲುವರಾಯಸ್ವಾಮಿಯವರನ್ನು ರಾಜಕೀಯ ವ್ಯಭಿಚಾರಿ ಎಂದು ಜರಿದಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಮುಖಂಡರು, ಶಾಸಕ ಸುರೇಶ್‍ಗೌಡ ತಲೆ ಹಿಡಿಯೋದರಲ್ಲಿ ಎತ್ತಿದ ಕೈ. ತಾಲೂಕಿನ ನಾವು ಇದನ್ನು ಹತ್ತಿರದಿಂದ ನೋಡಿದ್ದೇವೆ. ಸುರೇಶ್‍ಗೌಡ ಗೆಲ್ಲಲು ಮಾಜಿ ಶಾಸಕ ಶಿವರಾಮೇಗೌಡ, ಎಂಎಲ್‍ಸಿ ಅಪ್ಪಾಜಿಗೌಡ ಸೇರಿದಂತೆ ಹಲವರು ಕಾರಣರಾಗಿದ್ದಾರೆ.

ಸುರೇಶ್‍ಗೌಡ ಈಗಾಗಲೇ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷೇತರರಾಗಿ ನಿಲ್ಲುವ ಮೂಲಕ ಅವರ ಗಂಡಸ್ತನ ತೋರಿಸಲಿ. ಸುರೇಶ್‍ಗೌಡ ಎಣ್ಣೆ ಕುಡಿದು ನಾಲೆ ಮೇಲೆ ಓಡಾಡುತ್ತಾರೆ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ. ಸುರೇಶ್‍ಗೌಡ ಇನ್ನು ಮುಂದಾದರೂ ಚಿಕ್ಕ ಚಿಕ್ಕ ಮಾತುಗಳನ್ನಾಡುವುದು ಬಿಟ್ಟು ಅಭಿವೃದ್ಧಿ ಕೆಲಸ ಮಾಡಲಿ ಎಂದು ಆಕ್ರೋಶ ಹೊರಹಾಕಿದ್ದಾರೆ.

ಇದೇ ವೇಳೆ ಮಾಡನಾಡಿದ ಕಾಂಗ್ರೆಸ್ ಮುಖಂಡ ತುರುಬನಹಳ್ಳಿ ರಾಜೇಗೌಡ ಅವರು ಶಾಸಕ ಸುರೇಶ್‍ಗೌಡ ಅವರನ್ನು ಅಪ್ಪ ಇಲ್ಲದೆ ಹುಟ್ಟಿದ ಮಗು ತರಹ ಎಂದು ಜರಿದು, ಇನ್ನು ಮುಂದೆ ಮಾತನಾಡುವಾಗ ಎಚ್ಚರಿಕೆಯಿಂದ ಇರುವಂತೆ ಆಗ್ರಹಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *