ನವಜೋತ್ ಸಿಂಗ್ ಸಿಧುಗೆ ಅನಾರೋಗ್ಯ – ಆಸ್ಪತ್ರೆಗೆ ದಾಖಲು

ಚಂಡೀಗಢ: ಪಟಿಯಾಲ ಕೇಂದ್ರ ಕಾರಾಗೃಹದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ಪ್ರಭಾವಿ ನಾಯಕ ನವಜೋತ್ ಸಿಂಗ್ ಸಿಧು ಇಂದು ಮಧ್ಯಾಹ್ನ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

34 ವರ್ಷಗಳ ಹಿಂದಿನ ಪ್ರಕರಣವೊಂದರಲ್ಲಿ ಪಟಿಯಾಲ ಕೇಂದ್ರೀಯ ಕಾರಾಗೃಹದಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು, ಚಂಡೀಗಢದ PGIMER ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ವಾರಣಾಸಿ ಬಾಂಬ್ ಬ್ಲಾಸ್ಟ್‌ ಹಂತಕನಿಗೆ ಮರಣದಂಡನೆ – 16 ವರ್ಷಗಳ ಬಳಿಕ ಶಿಕ್ಷೆ

ಸಿಧು ಅವರನ್ನು ಬಿಗಿ ಭದ್ರತೆಯಲ್ಲಿ ಪಟಿಯಾಲ ಕಾರಾಗೃಹದಿಂದ PGIMER ಆಸ್ಪತ್ರೆಗೆ ಕರೆತರಲಾಯಿತು. ಆರೋಗ್ಯ ಪರೀಕ್ಷೆ ಬಳಿಕ ಅವರನ್ನು ದಾಖಲು ಮಾಡಿಕೊಳ್ಳಲಾಗಿದ್ದು, ಅವರನ್ನು ಮತ್ತಷ್ಟು ಆರೋಗ್ಯ ಪರೀಕ್ಷೆಗೊಳಪಡಿಸಲಾಗುತ್ತದೆ ಎಂದು ಹೇಳಲಾಗಿದೆ.

1988ರಲ್ಲಿ ರಸ್ತೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸಿಧು ಅವರಿಗೆ ಸುಪ್ರೀಂ ಕೋರ್ಟ್ ಒಂದು ವರ್ಷದ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿದೆ.  ಇದನ್ನೂ ಓದಿ: ಭಾರತ ಮತಾಂಧರನ್ನು ಪ್ರಶಂಸಿಸುವುದಿಲ್ಲ: ಪಾಕ್ ಪ್ರಧಾನಿಗೆ ಭಾರತ ಸರ್ಕಾರ ತೀವ್ರ ತರಾಟೆ

ಅದರಂತೆ ಮೇ 20ರಂದು ಸ್ಥಳೀಯ ನ್ಯಾಯಾಲಯಕ್ಕೆ ಶರಣಾದ ಅವರನ್ನು ಪಟಿಯಾಲ ಕಾರಾಗೃಹದಲ್ಲಿಡಲಾಗಿದೆ. ಕಾರಾಗೃಹದಲ್ಲಿ ಅವರನ್ನು ಗುಮಾಸ್ತನ ಕೆಲಸಕ್ಕೆ ಈಚೆಗಷ್ಟೇ ನೇಮಿಸಲಾಗಿತ್ತು. ಇದಾದ ಬಳಿಕ 2 ವಾರಗಳ ಹಿಂದಷ್ಟೇ ಅವರಿಗೆ ಪಟಿಯಾಲದಲ್ಲಿರುವ ರಾಜೇಂದ್ರ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು.

Comments

Leave a Reply

Your email address will not be published. Required fields are marked *