ಸರ್ಕಾರದಿಂದ ಗುಡ್ ನ್ಯೂಸ್- ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತ ಹೆಚ್ಚಳ

ಬೆಂಗಳೂರು: ಅನಾರೋಗ್ಯಪೀಡಿತ ಸರ್ಕಾರಿ ನೌಕರರಿಗೆ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ನೆಮ್ಮದಿಯ ಸುದ್ದಿಯೊಂದನ್ನ ಕೊಟ್ಟಿದೆ. ಕ್ಯಾನ್ಸರ್ ಚಿಕಿತ್ಸೆಗೆ ನೀಡಲಾಗುವ ಮೊತ್ತವನ್ನು ಹೆಚ್ಚಿಸಿದೆ.

ಕೇಂದ್ರ ಸರ್ಕಾರದ ಆರೋಗ್ಯ ಯೋಜನೆಯಡಿ (ಸಿಜಿಎಚ್?ಎಸ್) ಕ್ಯಾನ್ಸರ್ ಚಿಕಿತ್ಸೆಗೆ ನಿಗದಿಪಡಿಸಿದ ಮರುಪಾವತಿ ದರಪಟ್ಟಿಯನ್ನೇ ಇದೀಗ ರಾಜ್ಯ ಸರ್ಕಾರವೂ ಅಳವಡಿಸಿಕೊಳ್ಳಲು ತೀರ್ಮಾನಿಸಿದೆ. ಸರ್ಕಾರಿ ನೌಕರರು ಮತ್ತು ಅವರ ಅವಲಂಬಿತ ಕುಟುಂಬಸ್ಥರ ಕ್ಯಾನ್ಸರ್ ಚಿಕಿತ್ಸೆ ವೆಚ್ಚವನ್ನು ಪರಿಷ್ಕರಿಸಿದೆ. 3 ಹಂತದ ಚಿಕಿತ್ಸೆಗೂ ಹೊಸ ಪರಿಷ್ಕರಣೆ ಅನ್ವಯ ಆಗಲಿದೆ.

ಮೊದಲ ಹಂತದ 6 ಚಿಕಿತ್ಸಾ ವಿಧಾನಕ್ಕೆ 2700 ರೂ.ಯಿಂದ 18 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಭರಿಸಲಾಗುತ್ತದೆ. 2ನೇ ಹಂತದ 7 ಚಿಕಿತ್ಸಾ ವಿಧಾನಕ್ಕೆ 500 ರೂ.ಯಿಂದ 20 ಸಾವಿರದವರೆಗೆ ಚಿಕಿತ್ಸಾ ವೆಚ್ಚ ಹಾಗೂ 3ನೇ ಹಂತದ 6 ಸರ್ಜರಿ ವಿಧಾನಕ್ಕೆ 5 ಸಾವಿರದಿಂದ 45 ಸಾವಿರದವರೆಗೆ ಚಿಕಿತ್ಸಾ ವೆಚ್ಚವನ್ನು ನೀಡಲಾಗುತ್ತದೆ.

ಇಂಪ್ಲಾಂಟ್, ಸ್ಟೆಂಟ್ ಹಾಗೂ ಗ್ರಾಫ್ಟ್ ಗಳ ವೆಚ್ಚವನ್ನು ಸಿಜಿಎಚ್ಎಸ್ ಅನುಸಾರ ಪ್ಯಾಕೇಜ್ ದರದ ಜತೆಗೆ ಹೆಚ್ಚುವರಿಯಾಗಿ ಸೇರಿಸಿ ನೀಡಲಾಗುತ್ತದೆ ಎಂಬುದಾಗಿ ತಿಳಿದುಬಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *