ಕನ್ನಡ ರಾಜ್ಯೋತ್ಸವಕ್ಕೆ ಹಿರಿಯರಿಗೆ ಸರ್ಕಾರದಿಂದ ಬಂಫರ್ ಗಿಫ್ಟ್

ಸಾಂದರ್ಭಿಕ ಚಿತ್ರ

ಬೆಂಗಳೂರು: ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಮಾಸಾಶನವನ್ನು ಏರಿಕೆ ಮಾಡುವ ಮೂಲಕ ಹಿರಿಯರಿಗೆ ಬಂಫರ್ ಕೊಡುಗೆ ನೀಡಿದೆ.

ಸಿಎಂ ಕುಮಾರಸ್ವಾಮಿಯವರು ತಮ್ಮ ಬಜೆಟ್‍ನಲ್ಲಿ ಮಂಡಿಸಿದ್ದ ಮಾಸಾಶನ ಏರಿಕೆ ವಿಚಾರವನ್ನು ಅಧಿಕೃತವಾಗಿ ಜಾರಿಗೊಳಿಸಿದ್ದು, ನೂತನ ಮಾಸಾಶನ ಆದೇಶವು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಸಂಧ್ಯಾ ಸುರಕ್ಷಾ ಯೋಜನೆ ಹಾಗೂ ಇಂದಿರಾಗಾಂಧಿ ರಾಷ್ಟ್ರೀಯ ವ್ಯದ್ಧಾಪ್ಯ ಯೋಜನೆಯ ಮಾಸಾಶನವನ್ನು ಹೆಚ್ಚಳ ಮಾಡಿದ್ದು, ಸುಮಾರು 600 ರೂಪಾಯಿಗಳಿಂದ 1,000 ರೂಪಾಯಿಗೆ ಮಾಸಾಶನ ಏರಿಕೆಯಾಗಿದೆ.

ತೈಲ ದರಗಳ ಮೇಲಿನ ಸೆಸ್ ದರವನ್ನು ಇಳಿಕೆ ಮಾಡಿದ ಬಳಿಕ ಸಿಎಂ ಕುಮಾರಸ್ವಾಮಿ ಹಿರಿಯರಿಗೆ ಬಂಫರ್ ಕೊಡುಗೆ ನೀಡಿದ್ದಾರೆ. ಈ ಯೋಜನೆಯಿಂದ ಒಟ್ಟು 32 ಲಕ್ಷ ವೃದ್ಧರು ಹೆಚ್ಚಿನ ಮಾಸಾಶನನ್ನು ಪಡೆಯಲಿದ್ದು, ಒಟ್ಟು 660 ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನು ಸರ್ಕಾರದಿಂದ  ಬಿಡುಗಡೆಗೊಳಿಸಿದ್ದಾರೆ. ಈ ಯೋಜನೆಯನ್ನು 5 ವರ್ಷಗಳಲ್ಲಿ ಹಂತ ಹಂತವಾಗಿ ಸಂಪೂರ್ಣ ಏರಿಕೆ ಮಾಡುವ ಗುರಿಯನ್ನು ಸರ್ಕಾರ ಹೊಂದಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Comments

Leave a Reply

Your email address will not be published. Required fields are marked *