ದೆಹಲಿಯಲ್ಲಿ ನಂದಿನಿ ಸಿಗಲ್ಲ, ಬೇರೆ ಉತ್ಪನ್ನ ಮುಟ್ಟಲ್ಲ ಎನ್ನೋಕಾಗುತ್ತಾ?: ನಿರ್ಮಲಾ ಸೀತಾರಾಮನ್

– ಸಿದ್ದರಾಮಯ್ಯ ಕಾಲದಲ್ಲೇ ರಾಜ್ಯಕ್ಕೆ ಅಮುಲ್ ಎಂಟ್ರಿಯಾಗಿತ್ತು

ಬೆಂಗಳೂರು: ಹಾಲಿನ ಉತ್ಪನ್ನಗಳಾದ ನಂದಿನಿ (Nandini) ಹಾಗೂ ಅಮುಲ್ (Amul) ವಿಲೀನ ವಿಚಾರವಾಗಿ ನಡೆಯುತ್ತಿರುವ ಗಲಾಟೆಯನ್ನು ಕಾಂಗ್ರೆಸ್ (Congress) ರಾಜಕೀಯಗೊಳಿಸುತ್ತಿದೆ. ಸಿದ್ದರಾಮಯ್ಯ (Siddaramaiah) ಅವಧಿಯಲ್ಲೇ ಅಮುಲ್ ಕರ್ನಾಟಕಕ್ಕೆ (Karnataka) ಎಂಟ್ರಿಯಾಗಿತ್ತು. ಈಗ ಅವರೇ ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಹರಿಹಾಯ್ದಿದ್ದಾರೆ.

ಬೆಂಗಳೂರಿನಲ್ಲಿ (Bengaluru) ಹೇಳಿಕೆ ನೀಡಿದ ಸೀತಾರಾಮನ್, ಅಮುಲ್ ಹಾಗೂ ನಂದಿನಿ ಉತ್ಪನ್ನಗಳ ಗಲಾಟೆಯನ್ನು ಭಾವನಾತ್ಮಕವಾಗಿ ತೆಗೆದುಕೊಂಡು ಹೋಗಲಾಗುತ್ತಿದೆ. ಈ ಎರಡು ಉತ್ಪನ್ನಗಳ ವಿಚಾರವಾಗಿ ಆರೋಗ್ಯಕರ ಸ್ಪರ್ಧೆ ಇರಲಿ ಎಂದು ಸಲಹೆ ನೀಡಿದರು.

ನಾನು ಕರ್ನಾಟಕಕ್ಕೆ ಬಂದಾಗ ನಂದಿನ ಹಾಲು, ಪೇಡಾ ಹಾಗೂ ಇತರ ಉತ್ಪನ್ನಗಳನ್ನು ಇಷ್ಟಪಟ್ಟು ತೆಗೆದುಕೊಳ್ಳುತ್ತೇನೆ. ದೆಹಲಿಗೆ ಹೋದಾಗ ಅಯ್ಯೋ ಇಲ್ಲಿ ನಂದಿನಿ ಸಿಗಲ್ಲ, ಬೇರೆ ಯಾವ ಉತ್ಪನ್ನಗಳನ್ನೂ ನಾನು ಮುಟ್ಟಲ್ಲ ಎಂದು ಹೇಳಲು ಆಗುತ್ತಾ? ಹೀಗಾಗಿ ದೆಹಲಿಗೆ ಹೋದಾಗ ಅಮುಲ್ ಉತ್ಪನ್ನಗಳನ್ನು ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಸಿದ್ದರಾಮಯ್ಯ 8 ಸಾವಿರ ಕೋಟಿ ರೂ. ಅಕ್ರಮ ಮಾಡಿದ್ದಾರೆ: ಬೊಮ್ಮಾಯಿ ಆರೋಪ

ನಂದಿನಿ ಈಗ ಬೇರೆ ರಾಜ್ಯಗಳಲ್ಲಿಯೂ ಮಾರಾಟವಾಗುತ್ತಿದೆ. ರೈತರಿಗೆ ಹಾಲಿಗೆ ಅತಿ ಹೆಚ್ಚು ದುಡ್ಡು ಸಿಗುವಂತೆ ಮಾಡಿದ್ದು ಬಿಜೆಪಿ ಸರ್ಕಾರ ಎಂದು ಸೀತಾರಾಮನ್ ಹೇಳಿದರು. ಇದನ್ನೂ ಓದಿ: ಲಿಂಗಾಯತರೆಲ್ಲಾ ಭ್ರಷ್ಟರು ಎಂದು ನಾನು ಹೇಳಲೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ