ನಾನು ಕ್ಷೇತ್ರ ಹುಡುಕಾಡ್ತಿಲ್ಲ, ನನ್ನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ – ಸಿದ್ದರಾಮಯ್ಯ

ಮೈಸೂರು: ನಾನು ಕ್ಷೇತ್ರಗಳನ್ನ ಹುಡುಕುತ್ತಿಲ್ಲ, ಆದ್ರೆ ನನನ್ನ ಕ್ಷೇತ್ರಕ್ಕೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ ಅಷ್ಟೇ. ಮನೆಯವರ ಅಭಿಪ್ರಾಯವನ್ನ ಕೇಳುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾನು ಎಲ್ಲೇ ಸ್ಪರ್ಧೆಸಿದರೂ ಗೆಲ್ಲುವ ವಿಶ್ವಾಸ ಇದೆ. ನಾನು ಕ್ಷೇತ್ರಕ್ಕಾಗಿ ಹುಡುಕಾಡುತ್ತಿಲ್ಲ. ನನ್ನನ್ನ ಕ್ಷೇತ್ರಗಳಿಗೆ ಕರೆಯುವವರ ಸಂಖ್ಯೆ ಹೆಚ್ಚಾಗಿದೆ. ಕ್ಷೇತ್ರ ಕೂತೂಹಲಕ್ಕೆ ಬುಧವಾರ (ಮಾ.22) ತೆರೆ ಬೀಳಬಹುದು ಎಂದು ಹೇಳಿದ್ದಾರೆ. ಇದನ್ನೂ ಓದಿ: ಮಾರಕಾಸ್ತ್ರದಿಂದ ಹೊಡೆದು ಪತ್ನಿ ಕೊಲೆಗೈದು ತಾನೂ ಆತ್ಮಹತ್ಯೆಗೆ ಶರಣಾದ!

ಯುಗಾದಿ ಹಬ್ಬದ ದಿನ ಒಂದೇ ಹೆಸರು ಇರುವ ಕ್ಷೇತ್ರಗಳ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಅದರಲ್ಲಿ ನನ್ನ ಹೆಸರು ಇರುತ್ತೊ ಇಲ್ಲವೋ ಗೊತ್ತಿಲ್ಲ. ಆದ್ರೆ ವರುಣಾದಿಂದ (Varuna Constituency) ಯತೀಂದ್ರ ಹೆಸರು ಕ್ಲೀಯರ್ ಆಗಿದೆ. ಹೈ ಕಮಾಂಡ್ ಏನು ಮಾಡುತ್ತೊ ಗೊತ್ತಿಲ್ಲ. ನಾನು ಎಲ್ಲಾ ಆಯ್ಕೆಯನ್ನ ಹೈ ಕಮಾಂಡ್‌ಗೆ ಬಿಟ್ಟಿದ್ದೇನೆ. ಹೈಕಮಾಂಡ್ ನಿರ್ಧಾರವೇ ನನ್ನ ನಿರ್ಧಾರ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ಯಾಮ್ ಈಸ್ ಬ್ಯಾಕ್, ಹೊಸ ಫೋಟೋಶೂಟ್‌ನಲ್ಲಿ ಸಮಂತಾ ಮಿಂಚಿಂಗ್

ದಶಪಥ ಹೆದ್ದಾರಿ ಮಾಡಿದ್ದು ನಾವು: ಮುಂದುವರಿದು ಪ್ರಧಾನಿ ಮೋದಿ (NarendraModi) ವಿರುದ್ಧ ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ಅಡುಗೆ ಮಾಡಿದ್ದು ನಾವು ಅದನ್ನು ಬಡಿಸಲು ಈಗ ಪ್ರಧಾನಿ ಬರುತ್ತಿದ್ದಾರೆ. ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ಜಗತ್ತೆ ಕಣ್ಣು ಮುಚ್ಚಿಕೊಂಡಂತೆ ಆಗುವುದಿಲ್ಲ. ಪ್ರಧಾನಿ ಮಾತುಗಳೆನ್ನೆಲ್ಲ ಜನ ನಂಬುವುದಿಲ್ಲ. ದಶಪಥ ರಸ್ತೆ ಮಾಡಿದ್ದು ನಾವು, ಐಐಟಿಗೆ ಜಾಗ ಕೊಟ್ಟು ಗುದ್ದಲಿ ಪೂಜೆ ಮಾಡಿದ್ದು ನಾನು. ಇವರು ಈಗ ಬರೀ ಉದ್ಘಾಟನೆಗೆ ಬರುತ್ತಿದ್ದಾರೆ. ಇದೆಲ್ಲಾ ಜನರಿಗೆ ಅರ್ಥವಾಗುತ್ತೆ ಎಂದು ಕುಟುಕಿದ್ದಾರೆ.

Comments

Leave a Reply

Your email address will not be published. Required fields are marked *