18 ಕ್ಷೇತ್ರಗಳ ಕಾಂಗ್ರೆಸ್ ಅಧಿಕೃತ ಪಟ್ಟಿ ರಿಲೀಸ್

ನವದೆಹಲಿ: ಟಿಕೆಟ್ ಹಂಚಿಕೆಗಾಗಿ ಸಾಕಷ್ಟು ಕಸರತ್ತು ನಡೆಸಿದ್ದ ಕಾಂಗ್ರೆಸ್ ಕೊನೆಗೂ ರಾಜ್ಯದ 18 ಕ್ಷೇತ್ರಗಳಿಗೆ ಟಿಕೆಟ್ ಫೈನಲ್ ಮಾಡಿದೆ. ಹುಬ್ಬಳ್ಳಿ- ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಹೊರತುಪಡಿಸಿ ಕಾಂಗ್ರೆಸ್ ಪಾಲಿನ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮವಾಗಿದೆ.

ನೀರಿಕ್ಷೆಯಂತೆ ಒಂಭತ್ತು ಮಂದಿ ಹಾಲಿ ಸಂಸದರಿಗೆ ಕೈ ಹೈಕಮಾಂಡ್ ಟಿಕೆಟ್ ನೀಡಿದ್ದು, ಮೂರು ಹೊಸ ಮುಖಗಳಿಗೆ ಮಣೆ ಹಾಕಲಾಗಿದೆ. ಅಂದುಕೊಂಡತೆ ಮೈಸೂರಿನಿಂದ ತಮ್ಮ ಬೆಂಬಲಿಗ ವಿಜಯ್ ಶಂಕರ್ ಸೇರಿದಂತೆ ತಮ್ಮ ಶಿಷ್ಯರಿಗೆ ಟಿಕೆಟ್ ಕೊಡಿಸುವಲ್ಲಿ ಸಿದ್ದರಾಯಮ್ಯ ಯಶಸ್ವಿಯಾಗಿದ್ದಾರೆ.

ಅಚ್ಚರಿಯ ಬೆಳವಣಿಗೆಯಲ್ಲಿ ದಾವಣಗೆರೆಯಿಂದ ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಟಿಕೆಟ್ ನೀಡಲಾಗಿದ್ದು ಶಿವಶಂಕರಪ್ಪ ಪುತ್ರ ಎಸ್ ಎಸ್ ಮಲ್ಲಿಕಾರ್ಜುನ ಗೆ ಟಿಕೆಟ್ ನೀಡುವ ನಿರೀಕ್ಷೆ ಇತ್ತು. ಬಾಕಿ ಉಳಿದಂತೆ ಬೆಳಗಾವಿಯಿಂದ ವಿರುಪಾಕ್ಷಿ ಸಾದಣ್ಣನನವರ್, ಹಾವೇರಿಯಿಂದ ಡಿ.ಆರ್ ಪಾಟೀಲ್, ಬೀದರ್ ನಿಂದ ಈಶ್ವರ್ ಖಂಡ್ರೆ ಅವರಿಗೆ ಟಿಕೆಟ್ ನೀಡಲಾಗಿದೆ.

ಬೆಂಗಳೂರು ದಕ್ಷಿಣ ಕ್ಷೇತ್ರದ ವಿಚಾರವಾಗಿ ಬಿಜೆಪಿ ಸಸ್ಪೆನ್ಸ್ ಮುಂದುವರಿಸಿರುವಂತೆ ಇತ್ತ ಕಾಂಗ್ರೆಸ್ ಕೂಡ ಕಾದು ನೋಡುವ ತಂತ್ರಕ್ಕೆ ಮೊರೆ ಹೋಗಿದೆ. ರಾಜ್ಯದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ್ದರೂ ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಿಸಿಲ್ಲ.

ಬೆಂಗಳೂರು ದಕ್ಷಿಣದಿಂದ ತೇಜಸ್ವಿನಿ ಅನಂತ್ ಕುಮಾರ್ ಸ್ಪರ್ಧೆ ನಿಶ್ಚಿತ ಎನ್ನಲಾಗಿತ್ತು. ಹೀಗಾಗಿ ಕಾಂಗ್ರೆಸ್ ನಿಂದ ಗೋವಿಂದರಾಜ್ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕೆ ಇಳಿಸಲು ಕಾಂಗ್ರೆಸ್ ಪ್ಲಾನ್ ಮಾಡಿಕೊಂಡಿತ್ತು. ಆದರೆ ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡದೆ ಬಿಜೆಪಿ ತೀವ್ರ ಕುತೂಹಲ ಮೂಡಿಸಿದ್ದು ಒಂದು ವೇಳೆ ಪ್ರಧಾನಿ ಮೋದಿ ಇಲ್ಲಿಂದ ಸ್ಪರ್ಧೆ ಮಾಡಿದರೆ ಬದಲಿ ಅಭ್ಯರ್ಥಿ ಹಾಕುವ ಪ್ಲಾನ್ ಮಾಡಿದೆ.


ಯಾವ ಕ್ಷೇತ್ರದಲ್ಲಿ ಯಾರು ಅಭ್ಯರ್ಥಿ?
ಬೆಳಗಾವಿ – ವಿರೂಪಾಕ್ಷಿ ಎಸ್ ಸಾದಣ್ಣನವರ್
ಚಿಕ್ಕೋಡಿ – ಪ್ರಕಾಶ್ ಹುಕ್ಜೇರಿ
ಗದಗ ಹಾವೇರಿ – ಡಿ ಆರ್ ಪಾಟೀಲ್
ಬಾಗಲಕೋಟೆ – ವೀಣಾಕಾಶಪ್ಪನವರ್

ಕೊಪ್ಪಳ – ರಾಜಶೇಖರ್ ಹಿಟ್ನಾಳ್
ಬೀದರ್ – ಈಶ್ವರ್ ಖಂಡ್ರೆ
ಚಿತ್ರದುರ್ಗ – ಬಿ ಎನ್ ಚಂದ್ರಪ್ಪ
ಬಳ್ಳಾರಿ – ವಿ ಎಸ್ ಉಗ್ರಪ್ಪ

ರಾಯಚೂರು – ಬಿ ವಿ ನಾಯಕ್
ದಾವಣಗೆರೆ – ಶ್ಯಾಮನೂರು ಶಿವಶಂಕರಪ್ಪ
ಕೋಲಾರ – ಕೆ ಹೆಚ್ ಮುನಿಯಪ್ಪ
ಕಲಬುರಗಿ – ಮಲ್ಲಿಕಾರ್ಜುನ್ ಖರ್ಗೆ

ಬೆಂಗಳೂರು ಕೇಂದ್ರ – ರಿಜ್ವಾನ್ ಅರ್ಷದ್
ಮೈಸೂರು ಕೊಡಗು – ವಿಜಯಶಂಕರ್
ಮಂಗಳೂರು – ಮಿಥುನ್ ರೈ
ಚಿಕ್ಕಬಳ್ಳಾಪುರ – ವೀರಪ್ಪ ಮೊಯ್ಲಿ
ಬೆಂಗಳೂರು ಗ್ರಾಮಾಂತರ – ಡಿ ಕೆ ಸುರೇಶ್
ಚಾಮರಾಜನಗರ – ಧ್ರುವನಾರಯಣ

Comments

Leave a Reply

Your email address will not be published. Required fields are marked *