ಕಾಂಗ್ರೆಸ್‌ ಗ್ಯಾರಂಟಿ ನೆನಪಿಸಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು ಕೊಡದ ಅಜ್ಜಿ: ಕಂಗಾಲಾದ ಕಂಡಕ್ಟರ್

ರಾಯಚೂರು: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳಲ್ಲಿ (Congress Guarantee) ಒಂದಾದ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ (Free Bus Pass) ಘೋಷಣೆ ಹಿನ್ನೆಲೆ ಜಿಲ್ಲೆಯಲ್ಲಿ ಬಸ್ ಪ್ರಯಾಣಕ್ಕೆ ಟಿಕೆಟ್ ದುಡ್ಡು (Bus Ticket Price) ನೀಡಲು ಕಿರಿಕ್‌ ಮಾಡುತ್ತಿರುವ ಪ್ರಸಂಗಗಳು ದಿನೇ-ದಿನೇ ಹೆಚ್ಚಾಗುತ್ತಿದೆ.

ಅದೇ ರೀತಿ ಮಸ್ಕಿಯಿಂದ ಸಿಂಧನೂರಿಗೆ ತೆರಳುತ್ತಿದ್ದ ಬಸ್ ನಲ್ಲಿ ಅಜ್ಜಿಯೊಬ್ಬರು ಟಿಕೆಟ್ ದುಡ್ಡು ಕೊಡದೇ ಗಲಾಟೆ ಮಾಡಿದ್ದು ಕಂಡಕ್ಟರ್ ಕಂಗಾಲಾದ ಪ್ರಸಂಗ ನಡೆದಿದೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಭೂಕಂಪ ಆಗ್ತಿದೆ, ಏನಾದ್ರೂ ಮಾಡಿಕೊಳ್ಳಲಿ `ಗ್ಯಾರಂಟಿ’ಗಳನ್ನ ಈಡೇರಿಸಲಿ – ಸಿ.ಟಿ ರವಿ

 

ನಾನು ಟಿಕೆಟ್‌ಗೆ ರೊಕ್ಕ ಕೊಡಲ್ಲ ಅಂದ್ರೆ ಕೊಡಲ್ಲ ಅಂತಾ ಕಂಡಕ್ಟರ್‌ಗೆ ಅಜ್ಜಿ ಆವಾಜ್ ಹಾಕಿದ್ದಾರೆ. ಅಜ್ಜಿಯ ಮನವೊಲಿಸಿ ಟಿಕೆಟ್‌ ಹಣ ಪಡೆಯಲು ಕಂಡಕ್ಟರ್ ಹರಸಾಹಸ ಪಟ್ಟಿದ್ದಾನೆ. ಸರ್ಕಾರ ಇನ್ನೂ ನಮಗೆ ಆದೇಶ ಮಾಡಿಲ್ಲ ಮಾಡಿದ ಮೇಲೆ ದುಡ್ಡು ಕೊಡಬೇಡ ಎಂದ ಕಂಡಕ್ಟರ್‌ಗೆ, ʻನಾವು ವೋಟ್‌ ಹಾಕಿದ್ದೀವಿ ಫ್ರೀ ಟಿಕೆಟ್, ಫೀ ಕರೆಂಟ್ ಅಂತಾ ಹೇಳಿದ್ದಾರೆ. ಮಸ್ಕಿ ಶಾಸಕ ತುರವಿಹಾಳ ಬಸನಗೌಡ ಕೂಡ ದುಡ್ಡು ಕೊಡಬೇಡ ಅಂತಾ ಹೇಳಿದ್ದಾನೆ, ನಾನು ದುಡ್ಡು ಕೊಡಲ್ಲ ಅಂತಾ ಹೇಳಿ ಅಜ್ಜಿ ಹಠ ಹಿಡಿದ್ದರು.

ಕೊನೆಗೆ ಕಂಡಕ್ಟರ್ ಅಜ್ಜಿ ಮನವೊಲಿಸಿ ಟಿಕೆಟ್ ಹಣ ಪಡೆಯುವಲ್ಲಿ ಯಶಸ್ವಿಯಾದರು. ಇದನ್ನೂ ಓದಿ: ಹೇಳಿಕೆಗಳಿಗೆ ಬ್ರೇಕ್‌ ಬೀಳದಿದ್ರೆ ಸರ್ಕಾರದಿಂದ ಹೊರಗಿರುತ್ತೇನೆ: ಎಂಬಿಪಿ ವಿರುದ್ಧ ಡಿಕೆಶಿ ಕೆಂಡಾಮಂಡಲ