ಶಿವಮೊಗ್ಗ: ಸಿದ್ದರಾಮೋತ್ಸವ ಮುಗಿಯುತ್ತಿದ್ದಂತೆ ಕಾಂಗ್ರೆಸ್ ಇಬ್ಭಾಗ ಆಗುತ್ತದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮೋತ್ಸವ ವಿರೋಧ ಮಾಡುತ್ತೇನೆ ಅಂತಾ ಡಿಕೆಶಿ ಧೈರ್ಯವಾಗಿ ಹೇಳಬಹುದಿತ್ತು. ಬಹಿರಂಗವಾಗಿ ನನಗೂ ಸಿದ್ದರಾಮಯ್ಯ ಅವರಿಗೆ ವೈಮನಸ್ಸು ಇದೆ ಅಂತ ಒಪ್ಪಿಕೊಳ್ಳದ ಡಿಕೆಶಿ ಶಿಖಂಡಿ ರೂಪದಲ್ಲಿ ಹೇಳಿಕೆ ಕೊಡುತ್ತಿದ್ದಾರೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಸಿದ್ದರಾಮೋತ್ಸವಕ್ಕೆ ರಾಹುಲ್ ಗಾಂಧಿ ಬರೋದು ಗ್ಯಾರಂಟಿ; ಆದರೆ…!

ಸಿದ್ದರಾಮಯ್ಯ, ಡಿಕೆಶಿ ಚುನಾವಣೆಯಲ್ಲಿ ಗೆಲ್ಲುತ್ತಾರೋ, ಸೊಲುತ್ತಾರೋ ಗೊತ್ತಿಲ್ಲ. ಸಿದ್ದರಾಮಯ್ಯನಿಗೆ ಇನ್ನೂ ಕ್ಷೇತ್ರವೇ ಗೊತ್ತಿಲ್ಲ. ಆಗಲೇ ಮುಖ್ಯಮಂತ್ರಿ ಅಂತಾರೆ. ಜನತೆ ಇವರನ್ನು ನೋಡುತ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಡಿಕೆಶಿ ಇಬ್ಬರನ್ನೂ ಜನರೇ ಸೋಲಿಸುತ್ತಾರೆ. ಹಿಂದೆ ಸರ್ಕಾರವನ್ನು ಉರುಳಿಸಿದರು. ಬರೋ ಚುನಾವಣೆಯಲ್ಲಿ ಕಾಂಗ್ರೆಸ್ ವಿಪಕ್ಷವಾಗಿಯೂ ಉಳಿಯುವುದಿಲ್ಲ ಎಂದು ಹೇಳಿದ್ದಾರೆ.

Leave a Reply