ಷೇರುಪೇಟೆ ಸ್ಥಿತಿಗೆ ಮೋದಿ ಕಾರಣ: ಕಾಂಗ್ರೆಸ್ ಆರೋಪ

ನವದೆಹಲಿ: ಟ್ರಂಪ್ ಟಾರೀಫ್‌ನಿಂದ ಜಗತ್ತಿನ ಷೇರುಪೇಟೆಗಳೇ (Stock Market) ಉಡೀಸ್ ಆಗಿವೆ. ಜಾಗತಿಕ ವಾಣಿಜ್ಯ ಯುದ್ಧ ಭೀತಿ ಭಾರತೀಯ ಷೇರುಪೇಟೆಯನ್ನು ಮುಳುಗಿಸಿದೆ. ಹಿಂದೆಂದೂ ಕಂಡೂಕೇಳರಿಯದ ರೀತಿಯಲ್ಲಿ ದೇಶಿಯ ಸೂಚ್ಯಂಕ ಆರಂಭದಲ್ಲೇ ಮಹಾಪತನ ಕಂಡಿದೆ.

ಕೇವಲ 10 ಸೆಕೆಂಡ್‌ಗಳ ಅವಧಿಯಲ್ಲಿ ಹೂಡಿಕೆದಾರರು 20 ಲಕ್ಷ ಕೋಟಿ ರೂ. ಸಂಪತ್ತು ಕರಗಿಹೋಗಿದೆ. ಟ್ರೇಡಿಂಗ್ ಆರಂಭದಲ್ಲೇ ಸೆನ್ಸೆಕ್ಸ್ 3939.68 ಪಾಯಿಂಟ್ಸ್ ಅಂದ್ರೆ 5.22% ಪ್ರಮಾಣ ನಷ್ಟ ಹೋಯ್ತು. ಬಿಎಸ್‌ಇಯಲ್ಲಿ ಕಂಪನಿಗಳ ಮೌಲ್ಯ ಒಂದೇ ಸಲ 20,16,293.53 ಕೋಟಿ ರೂ. ಸಂಪತ್ತು ಕರಗಿತು. ಮಾರ್ಕೆಟ್ ಅಸ್ಥಿರತೆಯನ್ನು ಸೂಚಿಸುವ ವಿಕ್ಸ್ ಇಂಡೆಕ್ಸ್ ದಿಢೀರ್ ಎಂದು 66% ರಷ್ಟು ಹೆಚ್ಚಾಯ್ತು. ದಿನದ ಕೊನೆಯ ಹೊತ್ತಿಗೆ 2226 ಅಂಶಗಳ ನಷ್ಟದೊಂದಿಗೆ ಬಿಎಸ್‌ಇ ವಹಿವಾಟು ಮುಗಿಸಿತು.

ನಿಫ್ಟಿ ಸೂಚ್ಯಂಕ ಕೂಡ ಒಂದು ಸಾವಿರ ಅಂಶಗಳ ನಷ್ಟದೊಂದಿಗೆ ಶುರುವಾಯ್ತು. ದಿನದ ಕೊನೆಯಲ್ಲಿ ವಹಿವಾಟು 742 ಅಂಶಗಳ ನಷ್ಟದೊಂದಿಗೆ ಮುಗಿಯಿತು. ಇದು ಎಂದಿನಂತೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಷೇರುಪೇಟೆಯ ಮಹಾಪತನಕ್ಕೆ ಮೋದಿ (Narendra Modi) ಸರ್ಕಾರವೇ ಪ್ರಮುಖ ಕಾರಣ ಎಂದು ಕಾಂಗ್ರೆಸ್ (Congress) ಆಪಾದಿಸಿದೆ.

ಟ್ರಂಪ್-ಮೋದಿ ಕ್ರಮಗಳಿಂದಾಗಿಯೇ ಮಾರ್ಕೆಟ್ ನಷ್ಟ ಕಂಡಿದೆ. ಟಾರೀಫ್‌ಗೆ ತಕ್ಕಂತೆ ಮಾರ್ಕೆಟ್ ಸ್ಪಂದಿಸ್ತಿದೆ. ಇದು ನಮಗೆ ನಾವೇ ಮಾಡಿಕೊಂಡ ಗಾಯ ಎಂದು ಕಾಂಗ್ರೆಸ್‌ ನಾಯಕ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಸ್ಟಾಕ್ ಮಾರ್ಕೆಟ್‌ನಿಂದ ದೂರವಿರಿ ಎಂದು ಯುವಕರಿಗೆ ರಾಹುಲ್ ಗಾಂಧಿ ಕರೆ ನೀಡಿದ್ದಾರೆ.