ಖಾಸಗಿ ವಾಹಿನಿ ಸರ್ವೆಗೆ ಕೈ-ಕಮಲ ಫುಲ್ ಟೆನ್ಷನ್ – ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಸ್ಟರ್ ಪ್ಲಾನ್

ನವದೆಹಲಿ: ರಾಷ್ಟ್ರಮಟ್ಟದ ಖಾಸಗಿ ವಾಹಿನಿ ನಡೆಸಿದ ಚುನಾವಣಾ ಪೂರ್ವ ಸಮೀಕ್ಷೆ ವರದಿಯನ್ನ ಸಂಪೂರ್ಣ ಅಧ್ಯಯನ ನಡೆಸಿದ ಅಮಿತ್ ಶಾ, ರಾಜ್ಯ ಬಿಜೆಪಿ ನಾಯಕರಿಗೆ ಖಡಕ್ ವಾರ್ನ್ ಮಾಡಿದ್ದಾರೆ ಎಂಬುದಾಗಿ ಪಕ್ಷದ ಮೂಲಗಳಿಂದ ತಿಳಿದುಬಂದಿದೆ.

ಸೀಟು ಹೆಚ್ಚಳಕ್ಕೆ ಬಿಜೆಪಿ ಮಾಡಿರುವ ಮಾಸ್ಟರ್ ಪ್ಲಾನ್ ಏನು ಅಂತ ನೋಡೋದಾದ್ರೆ ಪ್ರಧಾನಿ ಮೋದಿ ಅವರನ್ನು ಪ್ರಚಾರಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ ಎನ್ನಲಾಗಿದೆ. ಇದನ್ನೂ ಓದಿ: ಕರ್ನಾಟಕ ಕುರುಕ್ಷೇತ್ರ -ಸಮೀಕ್ಷೆಯಲ್ಲಿ ಕರುನಾಡ ಕಿಂಗ್ ಯಾರು ?

ಪ್ರಧಾನಿ ನರೇಂದ್ರ ಮೋದಿಯೇ ನಮಗಿರುವ ಆಸರೆ. ಸೆಂಚುರಿ ದಾಟಿಸಲು ಪ್ರಧಾನಿಯವರೇ ಬೇಕು ಅಂತ ಅಮಿತ್  ಶಾ ನಡೆಸಿದ ಸಭೆಯಲ್ಲಿ ಮಹತ್ವದ ಚರ್ಚೆ ನಡೆಸಲಾಗಿದೆ. ಪ್ರಧಾನಿ ಮೋದಿ ಜಾಥಾ, ರೋಡ್ ಶೋ ಹೆಚ್ಚಳಕ್ಕೆ ನಿರ್ಧಾರ ಕೈಗೊಳ್ಳಲಾಗಿದೆ. ಮುಂದಿನ ವಾರದ ಅಂತ್ಯದಲ್ಲಿ ಪ್ರಧಾನಿಯವರು ರಾಜ್ಯಕ್ಕೆ ಬರಲಿದ್ದಾರೆ. 16ಕ್ಕೂ ಹೆಚ್ಚು ಸಮಾವೇಶ, 5ಕ್ಕೂ ಹೆಚ್ಚು ರೋಡ್ ಶೋನಲ್ಲಿ ಮೋದಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭಿಸಿದೆ.

ಕರ್ನಾಟಕ ಕುರುಕ್ಷೇತ್ರದಲ್ಲಿ ಯಾರಿಗೆ ಗೆಲುವು? ಯಾರಿಗೆ ಸೋಲು ಎನ್ನುವುದನ್ನು ಮತದಾರರು ನಿರ್ಧರಿಸಲು ಇನ್ನು 29 ದಿನಗಳು ಮಾತ್ರ ಬಾಕಿ ಇದೆ. ಇದರ ಮಧ್ಯೆ, ಚದುರಂಗದಾಟದ ಲೆಕ್ಕಾಚಾರ ಜೋರಾಗ್ತಿದೆ. ಕರ್ನಾಟಕದ ಚುನಾವಣೆ ಕುರಿತು ದೇಶಾದ್ಯಂತ ಭರ್ಜರಿ ಸರ್ವೆಗಳು ನಡೀತಿವೆ. ಈ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದ ಖಾಸಗಿ ವಾಹಿನಿ ಇಂಡಿಯಾ ಟುಡೇ ನಡೆಸಿದ ಖಾರ್ವಿ ಚುನಾವಣಾ ಪೂರ್ವ ಸಮೀಕ್ಷೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎಂದು ಹೇಳಿದೆ. ಮಾರ್ಚ್ 17 ರಿಂದ ಏಪ್ರಿಲ್ 05 ರ ಅವಧಿಯಲ್ಲಿ ಜಂಟಿ ಸಮೀಕ್ಷೆ ನಡೆಸಿದ್ದು, 27 ಸಾವಿರಕ್ಕೂ ಹೆಚ್ಚು ಮತದಾರರ ಅಭಿಪ್ರಾಯವನ್ನು ಸಂಗ್ರಹಿಸಿ ಚುನಾವಣಾ ಪೂರ್ವ ಸಮೀಕ್ಷೆ ಪ್ರಕಟಿಸಿದೆ.

Comments

Leave a Reply

Your email address will not be published. Required fields are marked *