ಕಾಂಗ್ರೆಸ್, ಜಿಹಾದಿ ಸಂಘಟನೆಗಳದ್ದು ಒಂದೇ ಧ್ಯೇಯ, ದೇಶವನ್ನು ತುಂಡರಿಸುವುದು: ಬಿಜೆಪಿ

ಬೆಂಗಳೂರು: ಕಾಂಗ್ರೆಸ್ (Congress) ಮತ್ತು ಜಿಹಾದಿ ಸಂಘಟನೆಗಳು (Jihadi organizations) ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರದ್ದೂ ಒಂದೇ ಧ್ಯೇಯ, ಅದು ದೇಶವನ್ನು ತುಂಡರಿಸುವುದು ಎಂದು ಬಿಜೆಪಿ (BJP) ಸರಣಿ ಟ್ವೀಟ್‍ಗಳ ಮೂಲಕ ಕಾಂಗ್ರೆಸ್ ವಿರುದ್ಧ ಕಿಡಿಕಾರಿದೆ.

ಕಾಂಗ್ರೆಸ್ ಮತ್ತು ಜಿಹಾದಿ ಸಂಘಟನೆಗಳು ಒಂದೇ ನಾಣ್ಯದ ಎರಡು ಮುಖಗಳು. ಇಬ್ಬರದ್ದೂ ಒಂದೇ ಧ್ಯೇಯ, ಅದು ದೇಶವನ್ನು ತುಂಡರಿಸುವುದು. ಈ ನಿಟ್ಟಿನಲ್ಲಿ ರಾಜಕೀಯ ಪಕ್ಷವಾಗಿ ಕಾಂಗ್ರೆಸ್ ಮುಂದುವರಿದರೆ, ಧಾರ್ಮಿಕತೆಯ ಹೆಸರಿನಲ್ಲಿ ಜಿಹಾದಿ ಸಂಘಟನೆಗಳು ಕಾರ್ಯಾಚರಿಸುತ್ತಿದ್ದವು. ದೇಶ ತುಂಡರಿಸಲು ಎಷ್ಟೊಂದು ಮುಖವಾಡಗಳು! ದೇಶದಲ್ಲಿ ನಕಲಿ ಗಾಂಧಿ ಕುಟುಂಬ ಉಗ್ರವಾದವನ್ನು ಪೋಷಿಸಿದರೆ ರಾಜ್ಯದಲ್ಲಿ ಅದರ ನೇತೃತ್ವ ವಹಿಸಿಕೊಂಡಿದ್ದು ಸಿದ್ದರಾಮಯ್ಯ (Siddaramaiah). ಇದನ್ನೂ ಓದಿ: ಚಿಕ್ಕ ವಯಸ್ಸಿನ ಹುಡುಗನದ್ದು ಆಕಸ್ಮಿಕ ಸಾವು ಎಂಬುದು ಅನುಮಾನ: ಶೋಭಾ ಕರಂದ್ಲಾಜೆ

ಸಮಾಜದಲ್ಲಿ ಅಸ್ಥಿರತೆ ಮೂಡಿಸಿ ತಮ್ಮ ವೈಯುಕ್ತಿಕ ಧಾರ್ಮಿಕ ಗುರಿಗಳನ್ನು ಹಿಂಸೆಯ ಮೂಲಕ ಪ್ರತಿಷ್ಠಾಪಿಸುವುದು ಈ ಜಿಹಾದಿಗಳ ಉದ್ದೇಶವಾಗಿತ್ತು. ಇಂತವರಿಗೂ ಕಾಂಗ್ರೆಸ್ ಬೆಂಬಲ ನೀಡುತ್ತಿರುವುದೇಕೆ? ಸಹಜ ದೇಶವಾಸಿಗಳ ಸೋಗಿನಲ್ಲಿ ದೇಶದಲ್ಲಿ ಆಂತರಿಕ ಭಯೋತ್ಪಾದನೆ ಸೃಷ್ಟಿಸುವ ಹುನ್ನಾರ ನಡೆಸಿದ ಜಿಹಾದಿ ಸಂತತಿಯ ಪಿಎಫ್‍ಐ (PFI) ಸೇರಿದಂತೆ ಸಮಾಜ ಘಾತುಕ ಸಂಘಟನೆಗಳನ್ನು ಮೋದಿ (Narendra Modi) ಸರ್ಕಾರ ನಿಷೇಧಿಸಿದೆ. ಜಿಹಾದಿ ಮನಸ್ಥಿತಿ ನೆಲೆಯೂರುವಲ್ಲಿ ಕಾಂಗ್ರೆಸ್ ಪಕ್ಷದ ಸಹಕಾರವಿದೆ. ಇವರ ಉಗ್ರ ಚಟುವಟಿಕೆಗೆ ಬೆನ್ನೆಲುಬಾಗಿ ನಿಂತಿದ್ದೇ ಕಾಂಗ್ರೆಸ್ ಎಂದು ಸರಣಿ ಟ್ವೀಟ್‍ಗಳ ಮೂಲಕ ಬಿಜೆಪಿ ವಾಗ್ದಾಳಿ ನಡೆಸಿದೆ. ಇದನ್ನೂ ಓದಿ: ಪರೇಶ್ ಮೇಸ್ತಾದು ಕೊಲೆಯೇ, ಸಿದ್ದು ಸರ್ಕಾರದಿಂದ ಸಾಕ್ಷ್ಯ ನಾಶ: ರವಿಕುಮಾರ್‌ ಕಿಡಿ

Live Tv
[brid partner=56869869 player=32851 video=960834 autoplay=true]

Comments

Leave a Reply

Your email address will not be published. Required fields are marked *