ಸರ್ಕಾರ ಅಸ್ಥಿರಗೊಳಿಸಲ್ಲ, ಕಾಂಗ್ರೆಸ್ ಹಾಗೂ ಜೆಡಿಎಸ್‍ಗೆ ಭಯ ಬೇಡ: ಬಿಎಸ್‍ವೈ

ಬೆಂಗಳೂರು: ನಾವು ಸರ್ಕಾರ ಅಸ್ಥಿರಗೊಳಿಸುವುದಿಲ್ಲ. ಆ ಭಯ ಕಾಂಗ್ರೆಸ್ ಹಾಗೂ ಜೆಡಿಎಸ್‍ನವರಿಗೆ ಬೇಡ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಗುರುಗ್ರಾಮದ ರೆಸಾರ್ಟ್‍ನಲ್ಲಿರುವ ನಮ್ಮ ಶಾಸಕರನ್ನೆಲ್ಲ ವಾಪಸ್ ಬರಲು ಹೇಳಿದ್ದೇನೆ. ಇವತ್ತು ನಮ್ಮ ಶಾಸಕರು ವಾಪಸ್ ಬರುತ್ತಾರೆ. ನಾವು ಯಾವುದೇ ಕಾರಣಕ್ಕೂ ಸರ್ಕಾರ ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಕೈಹಾಕಲ್ಲ. ನಮ್ಮ ಕೆಲಸ ಈಗ ಬರಗಾಲ ಪೀಡಿತ ಪ್ರದೇಶಗಳ ಅಧ್ಯಯನ ಮಾಡುವುದು ಎಂದು ಹೇಳಿದ್ದಾರೆ.

ಅಲ್ಲದೇ ಮಧ್ಯಾಹ್ನದೊಳಗೆ ರೆಸಾರ್ಟಿನಲ್ಲಿರುವ ನಮ್ಮ ಶಾಸಕರು ಬೆಂಗಳೂರಿಗೆ ಬರುವಂತೆ ಸೂಚಿಸಿದ್ದೇನೆ. ಎಲ್ಲರೂ ಹೊರಟು ಬರುತ್ತಿದ್ದಾರೆ. ಜನರ ಸಮಸ್ಯೆ ಕಡೆ ನಾವು ಗಮನ ಕೊಡುತ್ತೇವೆ. ಸರ್ಕಾರ ಅಸ್ಥಿರಗೊಳಿಸುವುದಿಲ್ಲ. ಇದರ ಬಗ್ಗೆ ಕಾಂಗ್ರೆಸ್ ಜೆಡಿಎಸ್ ನವರಿಗೆ ಯಾವುದೇ ಸಂಶಯ ಬೇಡ. ನಾವು ವಿರೋಧ ಪಕ್ಷದಲ್ಲಿದ್ದೇ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

ಅಷ್ಟೇ ಅಲ್ಲದೇ ಮಾಧ್ಯಮದವರು ಇಲ್ಲಿಗೆ ಮತ್ತೆ ಮತ್ತೆ ಬರುವುದು ಬೇಡ. ಏನಾದರೂ ವಿಶೇಷ ಇದ್ದರೆ ನಾನೇ ಹೇಳಿ ಕಳುಹಿಸುತ್ತೇನೆ ಎಂದು ಬಿಎಸ್‍ವೈ ತಿಳಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Comments

Leave a Reply

Your email address will not be published. Required fields are marked *