ಮಂಗಳೂರು ಕಾಂಗ್ರೆಸ್ ಸಭೆಯಲ್ಲಿ ಹೈಡ್ರಾಮಾ – ಸದಸ್ಯರನ್ನೇ ಹೊರಹಾಕಿದ ನಾಯಕರು

ಮಂಗಳೂರು: ಯೂತ್ ಕಾಂಗ್ರೆಸ್ ಮತ್ತು ಹಿರಿಯ ನಾಯಕರ ನಡುವೆ ಜಟಾಪಟಿ ನಡೆದಿದ್ದು, ಕೈ-ಕೈ ಮಿಲಾಯಿಸುವ ಮಟ್ಟಿಗೆ ಕಾರ್ಯಕರ್ತರ ಹೈಡ್ರಾಮಾ ತಲುಪಿದೆ. ಪರಿಣಾಮ ಸಭೆಯಿಂದ ನಾಯಕರು ಯೂತ್ ಕಾಂಗ್ರೆಸ್ ಸದಸ್ಯರನ್ನ ಹೊರಹಾಕಿದ್ದಾರೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ವಿಚಾರವಾಗಿ ಸಭೆ ನಡೆಯುತ್ತಿತ್ತು. ಕಾಂಗ್ರೆಸ್ ಕಾರ್ಯಕರ್ತರ ಪೂರ್ವನಿಯೋಜಿತವಾಗಿಯೇ ಈ ಸಭೆ ನಡೆಯುತ್ತಿತ್ತು. ಸಭೆಗೆ ಮಾಜಿ ಸಚಿವ ರಮಾನಾಥ್ ರೈ, ಮಾಜಿ ಸಚಿವ ಯು.ಟಿ.ಖಾದರ್, ಮಂಜುನಾಥ ಭಂಡಾರಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು. ಇದೇ ವೇಳೆ ರಮಾನಾಥ ರೈ ಅವರ ವಿರುದ್ಧ ಯುವಕರು ಹರಿಹಾಯ್ದಿದ್ದು, ಕಾರ್ಯಕರ್ತರ ಜಟಾಪಟಿ ಅತೀಯಾಗಿದೆ. ಅದು ಅಲ್ಲದೇ ಈ ವೇಳೆ ಜಿಲ್ಲಾ ಕಚೇರಿ ಸಭಾಂಗಣದ ಬಾಗಿಲು ಬಂದ್ ಮಾಡಿದ್ದಾರೆ. ಪರಿಣಾಮ ಕಾಂಗ್ರೆಸ್ ನಾಯಕರು ಯೂತ್ ಕಾಂಗ್ರೆಸ್ ಸದಸ್ಯರನ್ನ ಹೊರಹಾಕಿದ್ದಾರೆ. ಇದನ್ನೂ ಓದಿ: ನವೋದಯದಲ್ಲಿ ಕೋವಿಡ್ ಕೇರ್ ಕೇಂದ್ರ ತೆರೆಯಬೇಡಿ – ಕೊಡಗಿನ ಪೋಷಕರಿಂದ ವಿರೋಧ

ಗಲಾಟೆ ವಿಚಾರವಾಗಿ ಮಾತನಾಡಿದ ಯು.ಟಿ.ಖಾದರ್, ಕಚೇರಿಯಲ್ಲಿ ಯಾವುದೇ ರೀತಿಯಾಗಿ ಗಲಾಟೆ ನಡೆದಿಲ್ಲ. ಕಾರ್ಯಕರ್ತರು ಎಲ್ಲರೂ ಒಗ್ಗಟ್ಟಿನಲ್ಲಿ ಇದ್ದೇವೆ. ಬಿಜೆಪಿ ಜನ ವಿರೋಧಿ ನೀತಿ ಬಗ್ಗೆ ಸಭೆಯಲ್ಲಿ ಚರ್ಚೆ ಆಗಿದೆ. ಜನವಿರೋಧಿ ನೀತಿಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ವಿವಿಧ ಕಾರ್ಯಕರ್ತರು ತಮ್ಮ ಅಭಿಪ್ರಾಯ ಹೇಳಿದ್ದಾರೆ ಎಂದು ಹೇಳಿದರು.

ರಮಾನಾಥ ರೈ ಈ ಕುರಿತು ಪ್ರತಿಕ್ರಿಯಿಸಿದ್ದು, ಏನು ಗಲಾಟೆ ಇಲ್ಲ. ನಾರಾಯಣ ಗುರುಗಳಿಗೆ ಆದ ಅಪಮಾನ ಬಗ್ಗೆ ಚರ್ಚೆ ಆಗಿದೆ. ಯಾವ ರೀತಿಯಾಗಿ ಪ್ರತಿಭಟನೆ ಮಾಡಬೇಕು ಅನ್ನುವ ಭಿನ್ನ ಅಭಿಪ್ರಾಯ ಬಂದವು. ಸ್ವಲ್ಪ ಜನರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಬೇಕು ಎಂದರು. ಮಾತನಾಡುವಾಗ ಹಾಗೆ ಮಾಡಬೇಕು ಹೀಗೆ ಮಾಡಬೇಕು ಅನ್ನುವ ಚರ್ಚೆ ಆಯಿತು. ಕಾರ್ಯಕರ್ತರ ಬಗ್ಗೆ ನಾನು ಏನು ಮಾತನಾಡಿಲ್ಲ. ಕಾರ್ಯಕರ್ತರಿಗೆ ಇಲ್ಲಿ ಗಲಾಟೆ ಮಾಡಬೇಡಿ ಅಂತ ಹೇಳಿದೆ ಅಷ್ಟೇ ಎಂದು ತಿಳಿಸಿದರು. ಇದನ್ನೂ ಓದಿ:  ಪರ್ಯಾಯ ಅಂದ್ರೆ ಏನು? ಮಧ್ವಾಚಾರ್ಯರು ಕೊಟ್ಟಿರುವ ಅಕ್ಷಯ ಪಾತ್ರೆ, ಸಟ್ಟುಗವೇ ಅಧಿಕಾರ ಹಸ್ತಾಂತರಕ್ಕೆ ಅಂಕಿತ

Comments

Leave a Reply

Your email address will not be published. Required fields are marked *