ಮೈಸೂರು: ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದನೆಂದು ಆರೋಪಿಸಿ ಎಸ್‍ಡಿಪಿಐ ಕಾರ್ಯಕರ್ತನ ಮೇಲೆ ಕೈ ಕಾರ್ಯಕರ್ತರು ಚಾಕುವಿನಿಂದ ಹಲ್ಲೆ ಮಾಡಿರುವ ಘಟನೆ ಇಂದು ನಡೆದಿದೆ.
ಮೈಸೂರಿನ ಶಾಂತಿನಗರದ ರಮ್ಜಾ ಮಸೀದಿ ಬಳಿ ಈ ಘಟನೆ ನಡೆದಿದ್ದು, ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಲ್ಲೆಯ ಆರೋಪ ಮಾಡಲಾಗುತ್ತಿದೆ. ಘಟನೆಯಲ್ಲಿ ಓರ್ವ ಎಸ್‍ಡಿಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದ್ದು, ಕೂಡಲೇ ಗಾಯಾಳುವನ್ನು ನಗರದ ಕೆಆರ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರಿಂದ ಹಲ್ಲೆ ಆರೋಪ ಕೇಳಿಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Leave a Reply