ಬಾಗಲಕೋಟೆ: ಮತ ಚಲಾವಣೆಗೆ ಹೊರಟ ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು ಬಾಗಲಕೋಟೆಯ ಕಾಂಗ್ರೆಸ್ ಕಾರ್ಯಕರ್ತರು ತಡೆ ಹಿಡಿದಿದ್ದಾರೆ.
ಹಾಸ್ಟೆಲ್ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿನಿಯರನ್ನು 124 ಹಾಗೂ 125 ಮತಗಟ್ಟೆಯಲ್ಲಿ ಮತ ಚಲಾಯಿಸಲು ಹೊರಟಿದ್ದರು. ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ವಿದ್ಯಾರ್ಥಿಗಳನ್ನು ತಡೆದಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರು ಬಸವೇಶ್ವರ ವಿದ್ಯಾವರ್ಧಕ ಸಂಘದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಯಾವ ಊರಿನವರು ಇಲ್ಯಾಕೆ ವೋಟ್ ಹಾಕುತ್ತಿದ್ದೀರಿ ಎಂದು ಆವಾಜ್ ಹಾಕಿದ್ದಾರೆ. ವೋಟರ್ ಐಡಿ ಇದೆ ಎಂದರೂ ಕೈ ಕಾರ್ಯಕರ್ತರು ಮತ ಚಲಾಯಿಸಲು ಆಕ್ಷೇಪ ಎತ್ತಿದ್ದಾರೆ.
ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಅಡ್ರೆಸ್ ಹೇಳಿ, ಯಾವ ಊರು ಎಂದು ಆವಾಜ್ ಹಾಕಿದ್ದಾರೆ. ಸ್ಥಳದಲ್ಲಿ ಮಾತಿನ ಚಕಮಕಿ ಕೂಡ ನಡೆದಿದೆ. ಬಿಜೆಪಿಯವರು ಪರ ಊರಿನ ವಿದ್ಯಾರ್ಥಿಗಳಿಗೆ ವೋಟರ್ ಐಡಿ ರಚಿಸಿ ಕೊಟ್ಟು ಇಲ್ಲಿ ವೋಟ್ ಹಾಕಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪಿಸಿದ್ದಾರೆ.

Leave a Reply