ಖಂಡನೆ, ಮಂಡನೆ, ಎಚ್ಚರಿಕೆ ಸಾಕು, ಬಾಂಗ್ಲಾದೇಶಕ್ಕೆ ಸರಿಯಾಗಿ ಬುದ್ಧಿ ಕಲಿಸಿ: ಮುತಾಲಿಕ್‌

ಚಿಕ್ಕೋಡಿ: ಬಾಂಗ್ಲಾದೇಶ (Bangladesh) ಹುಟ್ಟಿದ್ದೇ ಭಾರತದಿಂದ (India)  ಹೇಗೆ ಹುಟ್ಟು ಹಾಕಿದ್ದೇವೆ ಹಾಗೆ ಸಾಯಲೂಬಹುದು. ಇದು ಭಾರತದ ಕೈಯಲ್ಲಿದೆ ಎಂದು ಶ್ರೀ ರಾಮಸೇನೆ ಅಧ್ಯಕ್ಷ ಪ್ರಮೋದ್‌ ಮುತಾಲಿಕ್ (Pramod Muthalik) ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹುಕ್ಕೇರಿ ಪಟ್ಟಣದಲ್ಲಿ ಚಿನ್ಮಯ್‌ ಕೃಷ್ಣ ದಾಸ್ ಬ್ರಹ್ಮಚಾರಿ (Chinmoy Krishna Brahmachari) ಅವರ ಬಂಧನ ಖಂಡಿಸಿ ಮಾತನಾಡಿದ ಅವರು, ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾದ ದೌರ್ಜನ್ಯ, ಅತ್ಯಾಚಾರದ ವಿರುದ್ಧ ಸ್ವಾಮೀಜಿ ಶಾಂತಿಯುತ ಪ್ರತಿಭಟನೆ ನಡೆಸಿದ್ದಾರೆ. ದೌರ್ಜನ್ಯದ ವಿರುದ್ಧ ಪ್ರತಿಭಟನೆ ನಡೆಸುವುದರಲ್ಲಿ ತಪ್ಪೇನಿದೆ? ಅಲ್ಪಸಂಖ್ಯಾತ ಹಿಂದೂಗಳ ರಕ್ಷಣೆ ಮಾಡಬೇಕಿರುವುದು ಸರ್ಕಾರದ ಜವಾಬ್ದಾರಿ‌ ಎಂದು ಕಿಡಿಕಾರಿದರು.

ಹಿಂದೂ ಸಮಾಜದ ಮೇಲಿನ‌ ಆಕ್ರಮಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಬಾಯಿಬಿಡಬೇಕು. ಖಂಡನೆ, ಮಂಡನೆ, ಎಚ್ಚರಿಕೆ ಸಾಕು ಮುಂದೆ ಕ್ರಮ ಕೈಗೊಳ್ಳಬೇಕು. ಹುಟ್ಟಿಸಿದಂತೆ ಬಾಂಗ್ಲಾದೇಶಕ್ಕೆ ಸರಿಯಾದ ಬುದ್ದಿ ಕಲಿಸುವ ಪ್ರಕ್ರಿಯೆ ಆಗಬೇಕು‌ ಎಂದು ಆಗ್ರಹಿಸಿದರು. ಇದನ್ನೂ ಓದಿ: ಬಾಂಗ್ಲಾದಲ್ಲಿ ಪ್ರತಿಭಟನೆ ವೇಳೆ ಹಿಂದೂ ವಕೀಲನ ಹತ್ಯೆ – ಮತ್ತೆ ಭುಗಿಲೆದ್ದ ಆಕ್ರೋಶ

ಸೊಕ್ಕಿನ ಮುಸ್ಲಿಂ ಕಿಡಿಗೇಡಿಗಳಿಂದ ನಮ್ಮ ದೇಶ ಸೇರಿದಂತೆ ಎಲ್ಲೆಡೆ ದೌರ್ಜನ್ಯ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕ್ರಮ ಕೈಗೊಳ್ಳದಿದ್ದರೆ ಹಿಂದೂ ಸಮಾಜ ನಿಮ್ಮ ಮೇಲೆ ಸಿಟ್ಟಾಗುತ್ತೆ. ಕೇಂದ್ರ ಸರ್ಕಾರ ತಕ್ಷಣ ಮಧ್ಯಪ್ರವೇಶಿಸಿ ಸ್ವಾಮೀಜಿ ಬಿಡುಗಡೆಗೆ ಮುಂದಾಗಬೇಕು ಎಂದು ಹೇಳಿದರು.